ಬಿಜೆಪಿಯನ್ನು 'ಚೇಳು' ಎಂದು ಕರೆಯಲು ಆರಂಭಿಸಿದ್ದು ರಾಜೀವ್ ಗಾಂಧಿಯವರು, ಅದು 1984ರಲ್ಲಿ: ಪ್ರಕಾಶ್ ಜಾವದೇಕರ್

ಕಾಂಗ್ರೆಸ್ ನಾಯಕ ಶಶಿ ತರೂರು ಅವರ ಪ್ರಧಾನಿ ನರೇಂದ್ರ ಮೋದಿ ಮತ್ತು ಶಿವಲಿಂಗದ ಮೇಲಿನ ಹೇಳಿಕೆ ...
ಪ್ರಕಾಶ್ ಜಾವದೇಕರ್
ಪ್ರಕಾಶ್ ಜಾವದೇಕರ್

ರಾಯ್ಪುರ್: ಕಾಂಗ್ರೆಸ್ ನಾಯಕ ಶಶಿ ತರೂರು ಅವರ ಪ್ರಧಾನಿ ನರೇಂದ್ರ ಮೋದಿ ಮತ್ತು ಶಿವಲಿಂಗದ ಮೇಲಿನ ಹೇಳಿಕೆ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತಿದ್ದು, ಅದು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು 1984ರ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷವನ್ನು ಚೇಳು ಎಂದು ಕರೆಯುವ ಮೂಲಕ ಸಾಬೀತಾಗಿತ್ತು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವದೇಕರ್ ಟೀಕಿಸಿದ್ದಾರೆ.

ಕೇಂದ್ರದಲ್ಲಿ ಮತ್ತು ಮುಂದಿನ ತಿಂಗಳು ಚುನಾವಣೆ ನಡೆಯುತ್ತಿರುವ ಛತ್ತೀಸ್ ಗಢದಲ್ಲಿ ಬಿಜೆಪಿ ಸರ್ಕಾರ ಮುಂದಿನ ವರ್ಷಗಳಲ್ಲಿ ಮಾವೋವಾದಿಗಳ ಸಮಸ್ಯೆಯನ್ನು ಬಗೆಹರಿಸಲು ದೃಢ ನಿಶ್ಚಯ ಮಾಡಿದೆ. ಆದರೆ ಕಾಂಗ್ರೆಸ್ ಕಾಂಗ್ರೆಸ್ ಪರೋಕ್ಷವಾಗಿ ಮಾವೋವಾದಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ಛತ್ತೀಸ್ ಗಢ ರಾಜ್ಯ ರಚನೆಯಾದಾಗ ಅಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಕ್ಸಲೀಯರು ಅಟ್ಟಹಾಸ ಮೆರೆಯುತ್ತಿದ್ದರು. ಹಿಂದೆ ನಕ್ಸಲೀಯರ ಹಿಡಿತದಲ್ಲಿ ಛತ್ತೀಸ್ ಗಢ ರಾಜ್ಯದ ಬಹುತೇಕ ಪ್ರದೇಶಗಳಿದ್ದರೆ ಇಂದು ಅದು ಮೂರನೇ ಒಂದು ಭಾಗಕ್ಕೆ ಇಳಿದಿದೆ, ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 350 ನಕ್ಸಲೀಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ರಾಯ್ಪುರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನ ಮಂತ್ರಿ ಮೋದಿಯವರು ಶಿವಲಿಂಗದ ಮೇಲೆ ಕುಳಿತ ಚೇಳಿನಂತೆ, ಅದನ್ನು ಕೈಯಿಂದ ತೆಗೆಯಲು ಸಾಧ್ಯವಿಲ್ಲ ಅಥವಾ ಚಪ್ಪಲಿಯಿಂದ ಹೊಡೆದು ಬಿಸಾಕಲೂ ಸಾಧ್ಯವಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಆರ್ ಎಸ್ಎಸ್ ವ್ಯಕ್ತಿಯೊಬ್ಬರು ಪತ್ರಕರ್ತರಿಗೆ ಹೇಳಿದ್ದರಂತೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರು ಕಳೆದ ಶನಿವಾರ ಹೇಳಿಕೆ ನೀಡಿದ್ದರು.

ಈ ಬಗ್ಗೆ ಕೇಳಿದಾಗ ಉತ್ತರಿಸಿದ ಪ್ರಕಾಶ್ ಜಾವದೇಕರ್, ರಾಜಕೀಯ ಮಟ್ಟದಲ್ಲಿ ಪ್ರಧಾನಿ ಮೋದಿಯವರನ್ನು ಹೇಗೆ ಎದುರಿಸುವುದು ಎಂದು ಕಾಂಗ್ರೆಸ್ ಗೆ ಗೊತ್ತಾಗುತ್ತಿಲ್ಲ, ಹೀಗಾಗಿ ಅದು ಮೋದಿಯವರ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡುವ ದಾರಿ ಕಂಡುಕೊಂಡಿದೆ. ರಾಹುಲ್ ಬಾಬಾ ಪ್ರತಿನಿತ್ಯವೆಂಬಂತೆ ಆಪಾದನೆ,ನಿಂದನೆ ಮಾಡುತ್ತಿದ್ದಾರೆ. ಜನರಿಗೆ ಏನು ಗೊತ್ತಿದೆ ಅದನ್ನು ಮಾತ್ರ ಮಾಡುತ್ತಾರೆ. ಶಶಿ ತರೂರು ಸ್ವಲ್ಪ ಆಧುನಿಕವಾಗಿದ್ದಾರೆ, ಆದರೆ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಾರೆ ಎಂದರು.

ಚೇಳು ಸಂಸ್ಕೃತಿ, ಹೇಳಿಕೆ ಎಲ್ಲವೂ 1984ರಲ್ಲಿ ಕಾಂಗ್ರೆಸ್ ನ ಪ್ರಚಾರವೇ, 1984ರ ಚುನಾವಣೆಯಲ್ಲಿ ಬಿಜೆಪಿಯನ್ನು ಚೇಳು ಎಂದು ಕರೆಯುವ ಮೂಲಕ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಆ ಶಬ್ದವನ್ನು ಜಾಹೀರು ಮಾಡಿದರು. ಅದು ಕಾಂಗ್ರೆಸ್ ನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಪ್ರಕಾಶ್ ಜಾವದೇಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com