ಶಬರಿಮಲೆ
ದೇಶ
ಶಬರಿಮಲೆಗೆ ಎಲ್ಲಾ ಧರ್ಮದವರೂ ಹೋಗಬಹುದು: ಕೇರಳ ಹೈಕೋರ್ಟ್
ಶಬರಿಮಲೆಗೆ ಎಲ್ಲರೂ ಹೋಗಬಹುದು. ಎಲ್ಲಾ ಧರ್ಮದ, ಜಾತಿಯ ಜನರು ಪ್ರವೇಶಿಸುವ ಮತ್ತು ಪೂಜಿಸುವ...
ಕೊಚ್ಚಿ: ಶಬರಿಮಲೆಗೆ ಎಲ್ಲರೂ ಹೋಗಬಹುದು. ಎಲ್ಲಾ ಧರ್ಮದ, ಜಾತಿಯ ಜನರು ಪ್ರವೇಶಿಸುವ ಮತ್ತು ಪೂಜಿಸುವ ರಾಜ್ಯದ ಏಕೈಕ ದೇವಸ್ಥಾನ ಅಯ್ಯಸ್ವಾಮಿ ದೇವಸ್ಥಾನವಾಗಿದ್ದು, ಹಿಂದೂಗಳಲ್ಲದವರಿಗೆ ಪ್ರವೇಶ ನಿಷೇಧಿಸಿದರೆ ಜಾತ್ಯತೀತ ಮೌಲ್ಯಗಳು ನಾಶವಾಗಲಿವೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಶಬರಿಮಲೆಗೆ ಹಿಂದೂಗಳಲ್ಲದವರಿಗೆ ನಿಷೇಧ ಹೇರುವಂತೆ ಕೋರಿ ಬಿಜೆಪಿ ನಾಯಕ ಟಿಜಿ ಮೋಹನದಾಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ಅರ್ಜಿ ಸಮಾಜವನ್ನು ಒಡೆಯಲಿದೆ ಅಥವಾ ಪ್ರತ್ಯೇಕಿಸಲಿದೆ ಎಂದು ಹೇಳಿದೆ.
ಇರುಮುಡಿ ಇಲ್ಲದಯೇ ಭಕ್ತರು ಅಯ್ಯಪ್ಪಸ್ವಾಮಿ ದರ್ಶನ ಪಡೆಯಬಹುದು. 18 ಮೆಟ್ಟಿಲು ಹತ್ತಲು ಮಾತ್ರ ಇರುಮುಡಿ ಕಡ್ಡಾಯವಾಗಿದೆ. ಇರುಮುಡಿ ಇಲ್ಲದೆ ಇದ್ದವರು ದೇವಸ್ಥಾನದ ಮತ್ತೊಂದು ಬಾಗಿಲು ಮೂಲಕ ಪ್ರವೇಶಿಸಬೇಕು. ಇದು ದೇವಾಲಯದಲ್ಲಿ ಇಷ್ಟು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ, ಅರ್ಜಿಯ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ