ಭೂಪಾಲ್: ಮಧ್ಯ ಪ್ರದೇಶದಲ್ಲಿ ಆಡಳಿತರೂಡ ಪಕ್ಷಕ್ಕೆ ದೊಡ್ಡ ಅಚ್ಚರಿ ಕಾದಿತ್ತು. ಬಿಜೆಪಿ ಶಾಸಕ ಸಂಜಯ್ ಶರ್ಮಾ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ, .ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಂಡೋರ್ ನ ನಿವಾಸದಲ್ಲಿ ಸಂಜಯ್ ಶರ್ಮಾ ಕಾಂಗ್ರೆಸ್ ಸೇರಿದ್ದಾರೆ..ನರಸಿಂಗ ಪುರ ಜಿಲ್ಲೆಯ ತೆಂಡುಕೇಡಾ ವಿಧಾನಸಭೆ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿದ್ದು ಮಧ್ಯಪ್ರದೇಶದ ಅತ್ಯಂತ ಶ್ರೀಮಂತ ಶಾಸಕರಾಗಿದ್ದಾರೆ..65 ಕೋಟಿ ರು ಆಸ್ತಿ ಘೋಷಿಸಿಕೊಂಡಿರುವ ಶರ್ಮಾ 2003 ಮತ್ತು 2013 ರಲ್ಲಿ ಆಯ್ಕೆಯಾಗಿದ್ದರು..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos