ನಾನು ರಾಷ್ಟ್ರೀಯ ನಾಯಕ, ಹಿಂದುವಾದಿ ಅಲ್ಲ- ರಾಹುಲ್ ಗಾಂಧಿ

ದೇವಾಲಯ ಭೇಟಿ ಬಗ್ಗೆ ಬಿಜೆಪಿಯಿಂದ ಯಾವುದೇ ಪ್ರಮಾಣ ಪತ್ರ ಬೇಕಿಲ್ಲ ಎಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಧರ್ಮಗಳ ಬಗ್ಗೆ ಕೇಸರಿ ಪಕ್ಷಕ್ಕಿಂತ ಹೆಚ್ಚಿನದ್ದಾಗಿ ತಿಳಿದುಕೊಂಡಿದ್ದೇನೆ. ರಾಷ್ಟ್ರೀಯ ನಾಯಕನಾಗಿ ಪ್ರತಿಯೊಂದು ಧರ್ಮವನ್ನು ಗೌರವಿಸುವುದಾಗಿ ಹೇಳಿದ್ದಾರೆ.
ಮಹಾಕಾಳೇಶ್ವರ ದೇವಾಲಯದಲ್ಲಿ ರಾಹುಲ್ ಗಾಂಧಿ ಪೂಜೆ
ಮಹಾಕಾಳೇಶ್ವರ ದೇವಾಲಯದಲ್ಲಿ ರಾಹುಲ್ ಗಾಂಧಿ ಪೂಜೆ

ನವದೆಹಲಿ: ದೇವಾಲಯ ಭೇಟಿ ಬಗ್ಗೆ ಬಿಜೆಪಿಯಿಂದ ಯಾವುದೇ ಪ್ರಮಾಣ ಪತ್ರ ಬೇಕಿಲ್ಲ ಎಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಧರ್ಮಗಳ ಬಗ್ಗೆ ಕೇಸರಿ ಪಕ್ಷಕ್ಕಿಂತ ಹೆಚ್ಚಿನದ್ದಾಗಿ ತಿಳಿದುಕೊಂಡಿದ್ದೇನೆ. ರಾಷ್ಟ್ರೀಯ ನಾಯಕನಾಗಿ ಪ್ರತಿಯೊಂದು ಧರ್ಮವನ್ನು ಗೌರವಿಸುವುದಾಗಿ ಹೇಳಿದ್ದಾರೆ.

ನಾನು ಹಿಂದೂವಾದಿ ನಾಯಕ ಅಲ್ಲ, ಆದರೆ, ರಾಷ್ಟ್ರೀಯ ನಾಯಕ, ಎಲ್ಲಾ ಧರ್ಮ, ಜಾತಿ, ಭಾಷೆ ಹಾಗೂ ವರ್ಗಗಳ ನಾಯಕನೆಂದಿದ್ದಾರೆ.

ಮಧ್ಯಪ್ರದೇಶ ಮತಿತ್ತರ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ರಾಹುಲ್ ಗಾಂಧಿ ಫ್ಸಾನ್ಸಿ ಡ್ರೆಸ್ ನಲ್ಲಿ ದೇವಾಲಯ ಭೇಟಿ ಬಗ್ಗೆ ಬಿಜೆಪಿ ಟೀಕಿಸಿದ ಬೆನ್ನಲ್ಲೆ  ಪ್ರತ್ರಿಕಿಯಿಸಿರುವ ರಾಹುಲ್ ಗಾಂಧಿ, ದೇಶದ ದೇವಾಲಯಗಳು ಬಿಜೆಪಿ ಮತ್ತು ಆರ್ ಎಸ್ ಎಸ್ ಆಸ್ತಿನಾ ? ಪ್ರಧಾನಿ ಮೋದಿ ಮತ್ತು ಶಾ ದೇವಾಲಯ ಭೇಟಿ ಗುತ್ತಿಗೆ ಪಡೆದಿದಾರೆಯೇ ಎಂದು  ಪ್ರಶ್ನಿಸಿದ್ದಾರೆ.

ಇಂದೂರ್ ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ನರೇಂದ್ರಮೋದಿ ಹಾಗೂ ಅಮಿತ್ ಶಾ  ದೇವಾಲಯದ ಸಂಪ್ರದಾಯದಂತೆ ಬಟ್ಟೆ ತೊಟ್ಟು ಭೇಟಿ ನೀಡಿದ್ದಾಗ ಮೌನವಾಗಿರುವ ಬಿಜೆಪಿ, ಕಮಲ್ ನಾಥ್, ಜ್ಯೋತಿರಾದಿತ್ಯ ಸಿಂಧಿಯಾ, ತಾನೂ ಮಾತ್ರ ದೇವಾಲಯ ಸಂಪ್ರದಾಯದಂತೆ ಬಟ್ಟೆ ಧರಿಸಿದಾಗ ಏಕೆ ಪ್ರಶ್ನಿಸುತ್ತದೆ.  ಹಿಂದೂತ್ವದ ಪ್ಯಾನ್ಸಿ ಡ್ರೆಸ್ ಪ್ರದರ್ಶನ ಮಾಡುತ್ತಿರುವುದಾಗಿ ಹೇಳುತ್ತದೆ ಎಂದು ರಾಹುಲ್ ಕಿಡಿಕಾರಿದರು.

ಉಜ್ಜೈನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಾಹುಲ್ ಗಾಂಧಿ ಎರಡು ದಿನಗಳ ಮಧ್ಯಪ್ರದೇಶ ಪ್ರವಾಸ ಆರಂಭಿಸಿದ್ದಾರೆ.

ರಾಹುಲ್ ಗಾಂಧಿ ದೇವಾಲಯ ಭೇಟಿ ಬಳಿಕ ಮಾತನಾಡಿದ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, ರಾಹುಲ್ ಗಾಂಧಿ ನಿರಂತರವಾಗಿ  ಹಿಂದೂಗಳು ಉಡುಪಿನ ಪ್ರದರ್ಶನ ಮಾಡುತ್ತಿದ್ದು, ಹಿಂದೂಗಳ ಗಮನ ಬೇರೆಡೆ ಸೆಳೆಯುತ್ತಿದ್ದಾರೆ.  ರಾಹುಲ್ ಗಾಂಧಿ ಯಾವ  ಗೊತ್ರಾಕ್ಕೆ ಸೇರಿದ್ದಾರೆ ಎಂಬುದನ್ನು ಸ್ಪಷ್ಪಪಡಿಸಬೇಕು ಎಂದು ಆಗ್ರಹಿಸಿದ್ದರು.

ದೇವಾಲಯಕ್ಕೆ ಹೋಗಿ ಪೊಜೆ ಸಲ್ಲಿಸಬೇಕು ಎಂಬ ಬಾವನೆ ಬಂದರೆ ಖಂಡಿತ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತೇನೆ.  ಧರ್ಮಗಳ ಬಗ್ಗೆ ಬಿಜೆಪಿಗಿಂತ ಚೆನ್ನಾಗಿ ತಿಳಿದಿದ್ದು, ಅವರಿಂದ ಯಾವುದೇ ಪ್ರಮಾಣ ಪತ್ರ ಬೇಕಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ಎಲ್ಲಾ ಧರ್ಮಗಳನ್ನು ಗೌರವಿಸಲಿದ್ದು,  ಮಸೀದಿ, ಗುರುದ್ವಾರಗಳು, ಚರ್ಚ್ ಮತ್ತಿತರ ಎಲ್ಲಾ ಪೂಜಾ ಸ್ಥಳಗಳಿಗೂ ಭೇಟಿ ನೀಡುವುದಾಗಿ ಹೇಳಿದ್ದಾರೆ.  ಹಿಂದೂ ಧರ್ಮ ಎಲ್ಲರನ್ನೂ ಗೌರವಿಸಲು, ಪ್ರೀತಿಸಲು ಕಲಿಸುತ್ತದೆ. ಆದರೆ,  ದ್ವೇಷ, ಅಭದ್ರತೆ, ಭೀತಿಯನ್ನು ಹೆಚ್ಚಿಸುವುದು ಬಿಜೆಪಿಯ ಹಿಂದೂತ್ವ ಕಲ್ಪನೆಯಾಗಿದೆ ಎಂದು  ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com