ಪಂಚ ರಾಜ್ಯಗಳ ಚುನಾವಣೆ ಎಫೆಕ್ಟ್: ಸರ್ಕಾರದ ಹೊಸ ಶಿಕ್ಷಣ ನೀತಿ ಮುಂದೂಡಿಕೆ

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಹು ನಿರೀಕ್ಷಿತ ಹೊಸ ಶಿಕ್ಷಣ ನೀತಿ ಮತ್ತೆ ಮುಂದೂಡಲ್ಪಟ್ಟಿದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಹು ನಿರೀಕ್ಷಿತ ಹೊಸ ಶಿಕ್ಷಣ ನೀತಿ ಮತ್ತೆ ಮುಂದೂಡಲ್ಪಟ್ಟಿದೆ. ಶಿಕ್ಷಣ ನೀತಿಯನ್ನು ರೂಪಿಸಲು ರಚಿಸಲಾಗಿದ್ದ ಸಮಿತಿಗೆ ನೀಡಲಾಗಿದ್ದ ಅವಧಿ ವಿಸ್ತರಣೆ ಇಂದು ಕೊನೆಯಾಗುತ್ತಿದ್ದು ಶಿಕ್ಷಣ ನೀತಿ ಇನ್ನೂ ರಚನೆಯಾಗಿಲ್ಲ, ಪಂಚರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದೆ.

ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯಿಂದ ಶಿಕ್ಷಣ ನೀತಿಯನ್ನು ಸದ್ಯಕ್ಕೆ ವಿಳಂಬ ಮಾಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮೂಲಗಳು ಇಸ್ರೋದ ಮಾಜಿ ಅಧ್ಯಕ್ಷ ಕೆ ಕಸ್ತೂರಿರಂಗನ್ ಅವರಿಗೆ ಸೂಚಿಸಿವೆ ಎನ್ನಲಾಗುತ್ತಿದೆ.

ಐದು ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ನಿಟ್ಟಿನಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ಅಲ್ಲದೆ ರಾಜ್ಯಗಳ ಶಿಕ್ಷಣ ತಜ್ಞರೊಂದಿಗೆ ವಿಸ್ತೃತ ಚರ್ಚೆ ನಡೆಸಿ ಸಲಹೆ ಪಡೆಯಬೇಕಾಗಿರುವುದರಿಂದ ಸಮಿತಿಗೆ ಇನ್ನಷ್ಟು ಸಮಯ ಬೇಕಾಗಿರುವುದರಿಂದ ಸಹ ಮುಂದೂಡಲ್ಪಟ್ಟಿದೆ.

ಶಿಕ್ಷಣ ನೀತಿ ರೂಪಿಸಲು ಕಳೆದ ವರ್ಷ ಜೂನ್ ನಲ್ಲಿ ತಂಡವನ್ನು ರಚಿಸಲಾಗಿತ್ತು. ಅದು ಕಳೆದ ಡಿಸೆಂಬರ್ ನಲ್ಲಿ ವರದಿ ಸಲ್ಲಿಸಬೇಕಾಗಿತ್ತು. ನಂತರ ಮಾರ್ಚ್ ವರೆಗೆ ಅವಧಿಯನ್ನು ವಿಸ್ತರಿಸಲಾಯಿತು. ನಂತರ ಮತ್ತೊಮ್ಮೆ ಆಗಸ್ಟ್ ವರೆಗೆ ವಿಸ್ತರಿಸಲಾಯಿತು. ಮತ್ತೆ ಎರಡು ತಿಂಗಳಿಗೆ ಮುಂದೂಡಲಾಯಿತು ಆದರೆ ಶಿಕ್ಷಣ ನೀತಿ ಇನ್ನೂ ರೂಪುಗೊಂಡಿಲ್ಲ.
ಸಮಾಜದ ಯಾವುದೇ ವರ್ಗದಿಂದ ವಿರೋಧ ವ್ಯಕ್ತವಾಗದಿರಲು ಸದ್ಯ ಚುನಾವಣೆ ಸಂದರ್ಭದಲ್ಲಿ ಶಿಕ್ಷಣ ನೀತಿ ಜಾರಿಗೆ ತರದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಸ್ಮೃತಿ ಇರಾನಿ ಕೇಂದ್ರ ಸಚಿವೆಯಾಗಿದ್ದ ಸಂದರ್ಭದಲ್ಲಿ ಸಂಸತ್ತಿನ ಮಾಜಿ ಕಾರ್ಯದರ್ಶಿ ಟಿಎಸ್ಆರ್ ಸುಬ್ರಹ್ಮಣ್ಯ ನೇತೃತ್ವದ ತಂಡ ಕರಡು ಶಿಕ್ಷಣ ನೀತಿಯನ್ನು ರಚಿಸಿತ್ತು. ನಂತರ ಪ್ರಕಾಶ್ ಜಾವದೇಕರ್ ಸಚಿವರಾದ ನಂತರ ಹೊಸ ಸಮಿತಿಯನ್ನು ರಚಿಸಲಾಯಿತು. ಸಮಿತಿಯಲ್ಲಿ ಕಸ್ತೂರಿರಂಗನ್ ಹೊರತುಪಡಿಸಿ 8 ಸದಸ್ಯರಿದ್ದಾರೆ. ಗಣಿತಜ್ಞೆ ಮಂಜುಳ್ ಭಾರ್ಗವ್ ಕೂಡ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com