
ನವದೆಹಲಿ: ಒಂದು ವೇಳೆ ಸಮಯಕ್ಕೆ ಸರಿಯಾದ ರೀತಿಯಲ್ಲಿ ರಿಯಲ್ ಎಸ್ಟೇಟ್ ನೋಂದಣಿ, ವ್ಯವಹಾರದ ಪ್ರಾರಂಭ ಮತ್ತು ಗುತ್ತಿಗೆ ಕ್ರಮದಲ್ಲಿ ಪ್ರಗತಿಯಾದರೆ ವಿಶ್ವ ಬ್ಯಾಂಕ್ ಸುಲಭ ವ್ಯವಾಹಾರ ಪಟ್ಟಿಯಲ್ಲಿ ಭಾರತ 50 ನೇ ಸ್ಥಾನಕ್ಕೇರಬಹುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ವಿಶ್ವಬ್ಯಾಂಕ್ ಸುಲಭ ವ್ಯವಹಾರ ಪಟ್ಟಿ-2019 ಬಿಡುಗಡೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ನೋಂದಣಿ, ವ್ಯವಹಾರ ಆರಂಭ, ತೆರಿಗೆ ಹಾಗೂ ಗುತ್ತಿಗೆ ಪ್ರದೇಶಗಳ ಅತಿಕ್ರಮದಲ್ಲಿ ಪ್ರಗತಿಯಾಗಬೇಕಾಗಿದೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರವನ್ನು ಕಡಿಮೆ ಮಾಡಲಾಗಿದೆ.ಅಲ್ಲದೇ ಆರ್ಥಿಕ ಕ್ಷೇತ್ರದಲ್ಲಿ ತಂದ ಸಾಕಷ್ಟು ಸುಧಾರಣೆಯಿಂದಾಗಿ ವಿಶ್ವ ಬ್ಯಾಂಕ್ ಸುಲಭ ವ್ಯವಹಾರ ಪಟ್ಟಿಯಲ್ಲಿ 77 ನೇ ಸ್ಥಾನಕ್ಕೇರುವಂತಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ 2019ರ ನಂತರ ಮತ್ತೆ ಪ್ರಧಾನಿಯಾದ ಕೂಡಲೇ ಮತ್ತಷ್ಟು ಸುಧಾರಣೆ ತರುವ ಮೂಲಕ ವಿಶ್ವ ಬ್ಯಾಂಕ್ ಸುಲಭ ವ್ಯವಹಾರ ಪಟ್ಟಿಯಲ್ಲಿ 50 ನೇ ಸ್ಥಾನಕ್ಕೇರಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Advertisement