ಪ್ರತಿ ಸಿಲಿಂಡರ್ ಅಡುಗೆ ಅನಿಲ ಬೆಲೆಯಲ್ಲಿ 2.94 ಏರಿಕೆ ! ಮಧ್ಯರಾತ್ರಿಯಿಂದಲೇ ಜಾರಿ

ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್ಪಿಜಿ) ಬೆಲೆಯಲ್ಲಿ ಹೆಚ್ಚಳವಾಗಿದೆ. ಪ್ರತಿ ಸಿಲಿಂಡರ್ ಗೆ 2.94 ಪೈಸೆಯಷ್ಟು ಏರಿಕೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವ ದೆಹಲಿ : ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್ಪಿಜಿ) ಬೆಲೆಯಲ್ಲಿ ಹೆಚ್ಚಳವಾಗಿದೆ.  ಪ್ರತಿ ಸಿಲಿಂಡರ್ ಗೆ 2.94 ಪೈಸೆಯಷ್ಟು ಏರಿಕೆ ಮಾಡಲಾಗಿದೆ.

 502.40.34 ರೂ. ಇದ್ದ 14 .2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಈಗ 502.40 ರೂಪಾಯಿಗೆ ಹೆಚ್ಚಳವಾಗಿದ್ದು, ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ದೇಶದ ಅತಿದೊಡ್ಡ  ತೈಲ ಪೂರೈಕೆ ಕಂಪನಿ ಭಾರತೀಯ ತೈಲ ನಿಗಮ ತಿಳಿಸಿದೆ.

ಕಳೆದ ಜೂನ್ ತಿಂಗಳಿನಿಂದ ಈವರೆಗೂ ಸತತ ಆರನೇ ತಿಂಗಳೂ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಆಗಿನಿಂದಲೂ  ಪ್ರತಿ ಸಿಲಿಂಡರ್ ಬೆಲೆಯಲ್ಲಿ  14. 13 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಮಾರುಕಟ್ಟೆ ಬೆಲೆಯಲ್ಲಿ ಎಲ್ಲಾ ಗ್ರಾಹಕರು ಅಡುಗೆ ಅನಿಲ ಕೊಳ್ಳುತ್ತಾರೆ. ಆದಾಗ್ಯೂ ಸರ್ಕಾರ ಸಬ್ಸಿಡಿ ಮೊತ್ತವನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆಗಳಲ್ಲಿ ಒದಗಿಸುವ ಮೂಲಕ ವರ್ಷವೊಂದರಲ್ಲಿ ಪ್ರತಿ ಕುಟುಂಬಕ್ಕೆ 14.2 ಕೆ.ಜಿ. 12 ಸಿಲಿಂಡರ್ ಗಳನ್ನು   ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಹಾಗೂ ವಿದೇಶಿ ವಿನಿಮಯ ದರಕ್ಕನುಗುಣವಾಗಿ ಪ್ರತಿ ತಿಂಗಳು ಸಬ್ಸಿಡಿ ಹಣದಲ್ಲಿ ವ್ಯತ್ಯಾಸವಾಗುತ್ತದೆ.

ಅಂತಾರಾಷ್ಟ್ರೀಯ ದರಗಳು ಹೆಚ್ಚಾದಾಗ ಸರ್ಕಾರ ಹೆಚ್ಚಿನ ಸಬ್ಸಿಡಿ ನೀಡುತ್ತದೆ. ಆದರೆ. ತೆರಿಗೆ ಕಾನೂನು ಹಾಗೂ ಎಲ್ ಪಿಜಿ ಮೇಲೆ ಜಿಎಸ್ ಟಿ ಅಡುಗೆ ಅನಿಲದ ಮಾರುಕಟ್ಟೆ ದರವನ್ನು ಲೆಕ್ಕಾಚಾರ ಮಾಡುತ್ತದೆ.

ಸಬ್ಸಿಡಿ ರಹಿತ  ಅಥವಾ ಮಾರುಕಟ್ಟೆಯಲ್ಲಿ  ಅಡುಗೆ ಅನಿಲ ಬೆಲೆ   60 ರೂಪಾಯಿಯಷ್ಟು ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್ ಬೆಲೆ  880 ರೂಪಾಯಿ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com