ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಭೇಟಿಗೆ ಔಪಚಾರಿಕ ಆಹ್ವಾನ ನೀಡಿರಲಿಲ್ಲ-ಮೂಲಗಳು

ಮುಂದಿನ ವರ್ಷದ ಗಣರಾಜೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದರು . ಆದರೆ. ಔಪಚಾರಿಕವಾಗಿ, ಅಥವಾ ಪತ್ರದ ಮುಖೇನ ಆಹ್ವಾನಿಸರಿಲ್ಲ ಎಂಬುದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ನವದೆಹಲಿ: ಮುಂದಿನ ವರ್ಷದ ಗಣರಾಜೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು  ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದರು . ಆದರೆ. ಔಪಚಾರಿಕವಾಗಿ, ಅಥವಾ ಪತ್ರದ ಮುಖೇನ ಆಹ್ವಾನಿಸರಿಲ್ಲ ಎಂಬುದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಪ್ರಧಾನಿ ಮೋದಿ ಅಮಂತ್ರಣಕ್ಕೆ ಪೂರ್ವ ನಿಗದಿತ ಕಾರ್ಯಕ್ರಮದಂತೆ ಗಣರಾಜ್ಯೋತ್ಸವ ಸಮಾರಂಭದಲ್ಲಿ  ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು  ಡೊನಾಲ್ಡ್ ಟ್ರಂಪ್ ಹೇಳಿದ ಎರಡು ದಿನಗಳ ಬಳಿಕ ವೈಟ್ ಹೌಸ್ ವಕ್ತಾರರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

2017ರಲ್ಲಿ ನರೇಂದ್ರ ಮೋದಿ ಅಮೆರಿಕಾ ಭೇಟಿ ಸಂದರ್ಭದಲ್ಲಿಯೇ  ಡೊನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸಿದ್ದರು. ಆದರೆ. ಔಪಚಾರಿಕವಾಗಿ ಅಥವಾ ಪತ್ರ ಮೂಲಕವಾಗಲೀ ಆಹ್ವಾನಿಸಿಲ್ಲ, ಔಪಚಾರಿಕ ಆಮಂತ್ರಣಕ್ಕೂ ಮುನ್ನ ಉಭಯ ದೇಶಗಳು ಅನೌಪಚಾರಿಕವಾಗಿ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

ಅಮೆರಿಕಾ ಅಧ್ಯಕ್ಷರು ಪಾಲ್ಗೊಳ್ಳುವ ಸಮಾರಂಭ, ದಿನಾಂಕ ಮತ್ತಿತರ ಅಂಶಗಳ ಬಗ್ಗೆ ಉನ್ನತ ಮಟ್ಟದ ನಿಯೋಗದಲ್ಲಿ ಮಾತುಕತೆ ನಡೆಸಲಾಗುತ್ತದೆ. ಆದರೆ, ಹೀಗೆ ಭಾರತ ಮಾಡಲಿಲ್ಲ ಎಂಬುದು ತಿಳಿದುಬಂದಿದೆ.
ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಅರ್ಜೀಂಟೀನಾದಲ್ಲಿ ಜಿ-20 ಶೃಂಗಸಭೆಯಲ್ಲಿ ಉಭಯ ದೇಶಗಳು ಪಾಲ್ಗೊಳ್ಳುತ್ತಿದ್ದು,  ದ್ವಿಪಕ್ಷೀಯ ಬಾಂಧವ್ಯ  ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com