ಅ.02 ರಂದು ಸುಪ್ರೀಂ ಕೋರ್ಟ್ ನ ನೂತನ ಮುಖ್ಯನ್ಯಾಯಾಧೀಶರ ಪ್ರಮಾಣ ವಚನ ಕಾರ್ಯಕ್ರಮ

ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಾಧೀಶರಾಗಿರುವ ರಂಜನ್ ಗೋಗೋಯ್ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶರಾಗಲಿದ್ದು ಅ.02 ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಅ.02 ರಂದು ಸುಪ್ರೀಂ ಕೋರ್ಟ್ ನ ನೂತನ ಮುಖ್ಯನ್ಯಾಯಾಧೀಶರ ಪ್ರಮಾಣ ವಚನ ಕಾರ್ಯಕ್ರಮ
ಅ.02 ರಂದು ಸುಪ್ರೀಂ ಕೋರ್ಟ್ ನ ನೂತನ ಮುಖ್ಯನ್ಯಾಯಾಧೀಶರ ಪ್ರಮಾಣ ವಚನ ಕಾರ್ಯಕ್ರಮ
ನವದೆಹಲಿ: ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಾಧೀಶರಾಗಿರುವ ರಂಜನ್ ಗೋಗೋಯ್ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶರಾಗಲಿದ್ದು ಅ.02 ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. 
ಹಾಲಿ ಸಿಜೆಐ ದೀಪಕ್ ಮಿಶ್ರಾ ಸರ್ಕಾರಕ್ಕೆ ನ್ಯಾ.ರಂಜನ್ ಗೋಗೋಯ್ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದಾರೆ. ಅ.2 ರಂದು ದೀಪಕ್ ಮಿಶ್ರಾ ನಿವೃತ್ತರಾಗಲಿದ್ದು,  ಶಿಫಾರಸ್ಸು ಅಂಗೀಕಾರವಾದರೆ ಅ.2 ರಂದು ರಂಜನ್ ಗೋಗೋಯ್ ನೂತನ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು 2019 ರ ನವೆಂಬರ್ 17 ವರೆಗೂ ಮುಂದುವರೆಯಲಿದ್ದಾರೆ. 
ಈ ವರ್ಷ ಅತಿ ಹೆಚ್ಚು ಸುದ್ದಿಯಾಗಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪತ್ರಿಕಾಗೋಷ್ಠಿಯಲ್ಲಿ ರಂಜನ್ ಗೋಗೋಯ್ ಸಹ ಇದ್ದರು.  2012 ರ ಏಪ್ರಿಲ್ ನಲ್ಲಿ ನ್ಯಾ.ಗೋಗೋಯ್ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಪಡೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com