ಮರು ಮೌಲ್ಯಮಾಪನ ಶುಲ್ಕದಿಂದ ದೆಹಲಿ ವಿವಿಗೆ 3 ಕೋಟಿ ರೂಪಾಯಿ ಆದಾಯ!

ದೆಹಲಿ ವಿಶ್ವವಿದ್ಯಾನಿಲಯ ಕೆವಲ ಮರು ಮೌಲ್ಯಮಾಪನ ಶುಲ್ಕದಿಂದ 3 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಮರು ಮೌಲ್ಯಮಾಪನ ಶುಲ್ಕದಿಂದ ದೆಹಲಿ ವಿವಿಗೆ 3 ಕೋಟಿ ರೂಪಾಯಿ ಆದಾಯ!
ಮರು ಮೌಲ್ಯಮಾಪನ ಶುಲ್ಕದಿಂದ ದೆಹಲಿ ವಿವಿಗೆ 3 ಕೋಟಿ ರೂಪಾಯಿ ಆದಾಯ!
ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯ ಕೆವಲ ಮರು ಮೌಲ್ಯಮಾಪನ ಶುಲ್ಕದಿಂದ 3 ಕೋಟಿ ರೂಪಾಯಿ ಆದಾಯ ಗಳಿಸಿದೆ. 
2015-16, 2017-18 ನೇ ಸಾಲಿನಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಫೋಕಾಪಿ, ಮರು ಮೌಲ್ಯಮಾಪನ, ಮರು ಪರಿಶೀಲನೆಗೆ ನೀಡಲಾಗಿರುವ ಶುಲ್ಕದಿಂದ ಬರೊಬ್ಬರಿ  3 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಆರ್ ಟಿಐ ತಿಳಿಸಿದೆ.  2015-16 2017-18 ರಲ್ಲಿ ವಿವಿ 2,89,12,310 ರೂಪಾಯಿ ಶುಲ್ಕ ಪಡೆದಿದೆ ಎಂದು ಸ್ವತಃ ದೆಹಲಿ ವಿವಿ ಹೇಳಿದೆ. 
ವಿದ್ಯಾರ್ಥಿಗಳು ತಮ್ಮ ನಿರ್ದಿಷ್ಟ ವಿಷಯದ ಉತ್ತರ ಪತ್ರಿಕೆಯ ಪ್ರತಿ ಪಡೆಯುವುದಕ್ಕೆ 750 ರೂಪಾಯಿ ಹಾಗೂ ಮರುಮೌಲ್ಯಮಾಪನಕ್ಕಾಗಿ 1,000 ರೂಪಾಯೊಗಳ ಶುಲ್ಕ ಪಾವತಿಸಬೇಕು, ಒಟ್ಟಾರೆ ಬಂದಿರುವ ಅಂಕಗಳನ್ನು ಮತ್ತೊಮ್ಮೆ ಪರಿಶೀಲಿಸುವುದಕ್ಕಾಗಿ 750 ರೂಪಾಯಿ ನೀಡಬೇಕಾಗುತ್ತದೆ.
ದೆಹಲಿ ವಿವಿ ವಿದ್ಯಾರ್ಥಿಯೊಬ್ಬರು ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗಳು ಪರಿಶೀಲನೆ ಮಾಡಲು ಶುಲ್ಕ ವಿಧಿಸುವುದನ್ನು ವಿರೋಧಿಸಿ, ಆರ್ ಟಿಐ ನ ಸೆಕ್ಷನ್ 2(j)  ಪ್ರಕಾರ ಉಚಿತವಾಗಿ ಉತ್ತರ ಪತ್ರಿಕೆ ಪರಿಶೀಲನೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು. ಈ ಸಂಬಂಧ ಕೇಳಲಾಗಿದ್ದ ಆರ್ ಟಿಐ ಗೆ ಮಾಹಿತಿ ನೀಡಲಾಗಿದ್ದು, ಮರು ಮೌಲ್ಯಮಾಪನ  ಶುಲ್ಕದಿಂದ 3 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com