ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಾಲ್ಯ ವಿವಾಹ ನಡೆದರೆ ಗ್ರಾಮದ ಮುಖ್ಯಸ್ಥನ ವಿರುದ್ಧ ಕಾನೂನು ಕ್ರಮಕ್ಕೆ ಎನ್ಎಚ್ಆರ್ ಸಿ ಶಿಫಾರಸು

ದೇಶದಲ್ಲಿ ಬಾಲ್ಯ ವಿವಾಹಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ಮುಂದಾಗಿರುವ ರಾಷ್ಟ್ರೀಯ ಮಾನವ...
ನವದೆಹಲಿ: ದೇಶದಲ್ಲಿ ಬಾಲ್ಯ ವಿವಾಹಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ಮುಂದಾಗಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ಆರ್ ಸಿ), ಬಾಲ್ಯ ವಿವಾಹ ನಡೆದರೆ ಆ ಗ್ರಾಮದ ಮುಖ್ಯಸ್ಥನ ವಿರುದ್ಧ ಹಾಗೂ ಸಹಾಯ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಶಿಫಾರಸು ಮಾಡಿದೆ.
ಪಂಚಾಯ್ ಚುನಾವಣೆಯ ನೀತಿ ಸಂಹಿತೆ ಬದಲಾವಣೆ ಮಾಡಿ, ಬಾಲ್ಯ ವಿವಾಹ ನಡೆದರೆ ಆ ಗ್ರಾಮದ ಸರ್ಪಂಚ್ ರನ್ನೇ ಹೊಣೆಗಾರರನ್ನಾಗಿ ಮಾಡಿ ಎಂದು ಎನ್ಎಚ್ಆರ್ ಸಿ ಪ್ರಧಾನ ಕಾರ್ಯದರ್ಶಿ ಅಂಬುಜ್ ಶರ್ಮಾ ಅವರು ರಾಜಸ್ಥಾನ, ಹರಿಯಾಣ, ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಬಿಹಾರ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಶಿಫಾರಸು ಮಾಡಿದ್ದಾರೆ.
ರಾಷ್ಟ್ರೀಯ ಸರಾಸರಿಯ ಪ್ರಕಾರ ಬಾಲ್ಯ ವಿವಾಹ ಪ್ರಮಾಣ ಕಡಿಮೆಯಾಗುತ್ತಿದ್ದು, ಶೇ.47.4ರಿಂದ ಶೇ.26.8ಕ್ಕೆ ಇಳಿಕೆಯಾಗಿದೆ. ಗಂಡು ಮಕ್ಕಳ ಬಾಲ್ಯ ವಿವಾಹ ಪ್ರಮಾಣದಲ್ಲೂ ಇಳಿಕೆಯಾಗಿದ್ದು, ಶೇ.32.3ರಿಂದ ಶೇ.20.3ಕ್ಕೆ ಇಳಿಕೆಯಾಗಿದೆ.
ಬಾಲ್ಯ ವಿವಾಹಕ್ಕೆ ಸಹಾಯ ಮಾಡುವ ಕೇಟರ್ ಗಳ ಹಾಗೂ ಕಲ್ಯಾಣ ಮಂಟಪಗಳ ಪರವಾನಗಿಯನ್ನು ರದ್ದುಗೊಳಿಸಬೇಕು ಮತ್ತು ಅವರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಎನ್ಎಚ್ಆರ್ ಸಿ ಶಿಫಾರಸು ಮಾಡಿದೆ.

Related Stories

No stories found.

Advertisement

X
Kannada Prabha
www.kannadaprabha.com