ಮೋದಿಕೇರ್ ನ ಮೊದಲ ಫಲಾನುಭವಿ ಈ 19 ದಿನಗಳ ಹಸುಗೂಸು!
ಕರ್ನಲ್ : ಆಗಸ್ಟ್ 15 ರಂದು ಹರಿಯಾಣ ರಾಜ್ಯದ ಕರ್ನಲ್ ನ ಕಲ್ಪನಾ ಚಾವ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ 19 ದಿನದ ಹಸುಗೂಸು ಕರಿಷ್ಮಾ ಪ್ರಧಾನಮಂತ್ರಿ ಆಯುಷ್ಮನ್ ಭಾರತ್ ಯೋಜನೆಯ ಮೊದಲ ಫಲಾನುಭವಿ.
ಈ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕರೀಷ್ಮಾ ತಾಯಿ ಮೌಸಾಮಿ, ಇದೊಂದು ಒಳ್ಳೆಯ ಯೋಜನೆಯಾಗಿದೆ. ಸರ್ಕಾರವೇ ಎಲ್ಲಾ ವೈಧ್ಯಕೀಯ ವೆಚ್ಚ ಭರಿಸಿದೆ ಎಂದು ಹೇಳಿದರು.
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಘೋಷಿಸಿದ್ದ ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ ಯೋಜನೆ ಸೆಪ್ಟೆಂಬರ್ 25 ರಿಂದ ಜಾರಿಗೆ ಬರಲಿದೆ.
ರಾಷ್ಟ್ರೀಯ ಆರೋಗ್ಯ ಸುರಕ್ಷತೆಯ ನೀತಿ ಈ ವರ್ಷದ ಆರಂಭದಿಂದ ಅನುಷ್ಠಾನಕ್ಕೆ ಬಂದಿತ್ತು. ಮೋದಿ ಕೇರ್ ಎಂದು ಕರೆಯಲಾಗುವ ಆಯುಷ್ಮನ್ ಭಾರತ್ ಯೋಜನೆ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಸರ್ಕಾರಿ ಜಾರಿಗೆ ತಂದಿತ್ತು.
ಸಾಮಾಜಿಕ ಆರ್ಥಿಕವಾಗಿ ಸಮೀಕ್ಷೆ ಆಧಾರದ ಮೇಲೆ 10 ಕೋಟಿ ಬಡ ಮತ್ತು ದುರ್ಬಲ ವರ್ಗದ ಕುಟುಂಬಗಳಿಗೆ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆ ವೆಚ್ಚಕ್ಕಾಗಿ 5 ಲಕ್ಷ ವಿಮೆಯನ್ನು ಒದಗಿಸುವ ಮಹತ್ವಕಾಂಕ್ಷಿಯ ಆರೋಗ್ಯ ಸುರಕ್ಷತಾ ವಿಮೆ ಇದಾಗಿದೆ.
ಈ ಯೋಜನೆ ಮೂಲಕ ದೇಶದ ಯಾವುದೇ ಭಾಗದಲ್ಲೂ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ