ಜ್ಯೋತಿರಾದಿತ್ಯ ಸಿಂಧಿಯಾ
ದೇಶ
ಬಿಜೆಪಿ ಶಾಸಕಿಯ ಪುತ್ರನಿಂದ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ಕೊಲೆ ಬೆದರಿಕೆ
ಬಿಜೆಪಿ ಶಾಸಕಿ ಉಮಾದೇವಿ ಖತಿಕ್ ಅವರ ಪುತ್ರ ಪ್ರಿನ್ಸ್ ದೀಪ್ ಲಾಲ್ ಚಂದ್ ಕಾರ್ತಿಕ್ ಅವರು ಕಾಂಗ್ರೆಸ್ ಸಂಸದ...
ದಮೋಹ್: ಬಿಜೆಪಿ ಶಾಸಕಿ ಉಮಾದೇವಿ ಖತಿಕ್ ಅವರ ಪುತ್ರ ಪ್ರಿನ್ಸ್ ದೀಪ್ ಲಾಲ್ ಚಂದ್ ಖತಿಕ್ ಅವರು ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಶೂಟ್ ಮಾಡುವುದಾಗಿ ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಹಾಕಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ, ನಿಮ್ಮ ದೇಹದಲ್ಲಿ ಝಾನ್ಸಿ ರಾಣಿಯನ್ನು ಕೊಂದ ಜೀವಾಜಿರಾವ್ ರಕ್ತ ಹರಿಯುತ್ತಿದ್ದು, ನೀವು ಹಟ್ಟಾಗೆ ಬಂದರೆ ನಾನು ನಿಮ್ಮನ್ನು ಶೂಟ್ ಮಾಡುತ್ತೇನೆ. ಒಂದು ನೀವು ಸಾಯಬೇಕು ಇಲ್ಲ ನಾನು ಸಾಯಬೇಕು ಎಂದು ಲಾಲ್ ಚಂದ್ ಖತಿಕ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಸೆಪ್ಟೆಂಬರ್ 5ರಂದು ಹಟ್ಟಾ ಜಿಲ್ಲೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ರ್ಯಾಲಿ ನಿಗದಿಯಾಗಿದ್ದು, ಜಿಲ್ಲೆಗೆ ಆಗಮಿಸದಂತೆ ಬಿಜೆಪಿ ಶಾಸಕಿಯ ಪುತ್ರ ಕಾಂಗ್ರೆಸ್ ನಾಯಕನಿಗೆ ಈ ರೀತಿ ಬೆದರಿಕೆ ಹಾಕಿದ್ದಾರೆ.
ಈ ಪೋಸ್ಟ್ ದುರದೃಷ್ಟಕರ. ಸಿಂಧಿಯಾ ಅವರು ಒಬ್ಬ ಗೌರವಯುತ ಸಂಸದರು. ನಾನು ನನ್ನ ಪುತ್ರನನ್ನು ಕರೆದು ಪೋಸ್ಟ್ ತೆಗೆದುಹಾಕುವಂತೆ ಸೂಚಿಸುತ್ತೇನೆ ಎಂದು ಮಧ್ಯ ಪ್ರದೇಶದ ಹಟ್ಟಾ ವಿಧಾನಸಭಾ ಕ್ಷೇತ್ರದ ಶಾಸಕಿ ಉಮಾದೇವಿ ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ