ದೇಶದ ಆರ್ಥಿಕ ಬೆಳವಣಿಗೆ ಇಳಿಮುಖಕ್ಕೆ ರಘುರಾಮ್ ರಾಜನ್ ಕಾರಣ, ನೋಟು ನಿಷೇಧವಲ್ಲ’

ದೇಶದ ಆರ್ಥಿಕ ಬೆಳವಣಿಗೆ ಇಳಿಮುಖವಾಗುವುದಕ್ಕೆ ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಅವರ ನೀತಿಗಳೇ ಕಾರಣವೇ ಹೊರತು ನೋಟು ನಿಷೇಧವಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್
ದೇಶದ ಆರ್ಥಿಕ ಬೆಳವಣಿಗೆ ಇಳಿಮುಖಕ್ಕೆ ರಘುರಾಮ್ ರಾಜನ್ ಕಾರಣ, ನೋಟು ನಿಷೇಧವಲ್ಲ’
ದೇಶದ ಆರ್ಥಿಕ ಬೆಳವಣಿಗೆ ಇಳಿಮುಖಕ್ಕೆ ರಘುರಾಮ್ ರಾಜನ್ ಕಾರಣ, ನೋಟು ನಿಷೇಧವಲ್ಲ’
ದೇಶದ ಆರ್ಥಿಕ ಬೆಳವಣಿಗೆ ಇಳಿಮುಖವಾಗುವುದಕ್ಕೆ ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಅವರ ನೀತಿಗಳೇ ಕಾರಣವೇ ಹೊರತು ನೋಟು ನಿಷೇಧವಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ. 
ಆರ್ಥಿಕ ಬೆಳವಣಿಗೆ ಇಳಿಕೆಯಾಗುವುದಕ್ಕೆ ಎನ್ ಪಿಎಗಳು ಹೆಚ್ಚುತ್ತಿರುವುದೂ ಸಹ ಕಾರಣವಾಗಿದೆ. ರಘುರಾಮ್ ರಾಜನ್ ಆರ್ ಬಿಐ ಗೌರ್ನರ್ ಆಗಿದ್ದ ವೇಳೆ ಜಾರಿಗೆ ತರಲಾಗಿದ್ದ ನಿಯಮಗಳಿಂದ ಬ್ಯಾಂಕಿಂಗ್ ಕ್ಷೇತ್ರ ಉದ್ಯಮ ವಲಯಕ್ಕೆ ಸಾಲ ನೀಡುವುದನ್ನು ನಿಲ್ಲಿಸುವಂತೆ ಮಾಡಿತ್ತು.  ಒಟ್ಟು ವಸೂಲಾಗದ ಸಾಲ ಪ್ರಮಾಣ (ಜಿಎನ್ ಪಿಎ) 2018 ರ ಜೂ.30 ವರೆಗೆ ಶೇ.11.52 ರಷ್ಟಿದ್ದು, ಮಾರ್ಚ್ 2019 ವೇಳೆಗೆ ಶೇ.10 ರಷ್ಟಾಗಲಿದೆ.  ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿ ಜೂನ್ ಅಂತ್ಯದ ವರೆಗೂ ಶೇ.5.92 ರಷ್ಟಿದ್ದು ವರ್ಷಾಂತ್ಯದ ವೇಳೆ ಶೇ.4.3 ರಷ್ಟಕ್ಕೆ ಇಳಿಯುವ ನಿರೀಕ್ಷೆ ಇದೆ. 
ವಸೂಲಾಗದೇ ಇರುವ ಸಾಲಕ್ಕೆ ಸಂಬಂಧಿಸಿದಂತೆ ಆರ್ ಬಿಐ ನ್ನು ಸಂಸತ್ ಸಮಿತಿಯೂ ಪ್ರಶ್ನಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com