ಮಧ್ಯಪ್ರದೇಶ: ನಾಪತ್ತೆ ಹಸುವಿನ ಹುಡುಕಾಟ : ವ್ಯಕ್ತಿಯೊರ್ವನ ಕೈ ಕತ್ತರಿಸಿದ ಕುಟುಂಬ ಸದಸ್ಯರು

ನಾಪತ್ತೆಯಾದ ಹಸುವಿನ ಹುಡುಕಾಟ ನಡೆಸುತ್ತಿದ್ದ ಕುಟುಂಬವೊಂದರ ಸದಸ್ಯರು35 ವರ್ಷದ ವ್ಯಕ್ತಿಯೋರ್ವನ ಕೈ ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ರೈಸೆನ್ ಬಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರೈಸೆನ್ :ನಾಪತ್ತೆಯಾದ ಹಸುವಿನ ಹುಡುಕಾಟ ನಡೆಸುತ್ತಿದ್ದ ಕುಟುಂಬವೊಂದರ ಸದಸ್ಯರು

35 ವರ್ಷದ ವ್ಯಕ್ತಿಯೋರ್ವನ ಕೈ ಕತ್ತರಿಸಿರುವ  ಘಟನೆ ಮಧ್ಯಪ್ರದೇಶದ  ರೈಸೆನ್  ಬಳಿ ನಡೆದಿದೆ ಎಂದು ಪೊಲೀಸರು  ಹೇಳಿದ್ದಾರೆ.
ಜಿಲ್ಲಾ ಕೇಂದ್ರದಿಂದ 40 ಕಿಲೋ ಮೀಟರ್ ದೂರದಲ್ಲಿರುವ ಪಿಪಾವಲ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ.ನಾಪತ್ತೆಯಾದ ಹಸುವಿಗಾಗಿ ಹುಡುಕಾಟ ನಡೆಸುತ್ತಿದ್ದ ಸಟ್ಟು ಯಾದವ್ ಸಂತ್ರಸ್ತ  ಕಲ್ಲು ಷಾಹು ಮನೆಗೆ ಹೋಗಿ ತನಿಖೆ ಮಾಡಿದ್ದಾನೆ.
ಈ ವೇಳೆ   ಸಟ್ಟು  ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ನಡೆದಿದ್ದು,  ಉದ್ರಿಕ್ತಗೊಂಡ ಯಾದವ್ ಕುಟುಂಬಸ್ಥರು ಷಾಹುವನ್ನು ಮರಕ್ಕೆ ಕಟ್ಟಿ  ಚಾಕುವಿನಿಂದ ಕೈ ಕತ್ತರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮೀನಾ ತಿಳಿಸಿದ್ದಾರೆ.
ಷಾಹು ಕುಟುಂಬ ಸದಸ್ಯರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರೆಲ್ಲಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಸುಲ್ತಾನ್ ಗಂಜ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ ಭೂಪಾಲ್ ನ ಆಸ್ರತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಯಿತು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com