ಪಿಎಂಎಲ್ಎ ಕೇಸ್: ಇಡಿ ನೊಟೀಸ್ ಗೆ 3 ವಾರದೊಳಗೆ ಉತ್ತರಿಸಿ, ಮಲ್ಯಗೆ ಮುಂಬೈ ಕೋರ್ಟ್ ಆದೇಶ

ಅಕ್ರಮ ಹಣ ಸಾಗಣೆ ತಡೆ ಕಾಯ್ದೆ(ಪಿಎಂಎಲ್ಎ) ಪ್ರಕರಣಕ್ಕೆ ಸಂಬಂಧಿಸಿ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ನೋಟೀಸ್ ಗೆ ಉತ್ತರಿಸಲು....
ವಿಜಯ್ ಮಲ್ಯ
ವಿಜಯ್ ಮಲ್ಯ
ಮುಂಬೈ: ಅಕ್ರಮ ಹಣ ಸಾಗಣೆ ತಡೆ ಕಾಯ್ದೆ(ಪಿಎಂಎಲ್ಎ) ಪ್ರಕರಣಕ್ಕೆ ಸಂಬಂಧಿಸಿ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ನೋಟೀಸ್ ಗೆ ಉತ್ತರಿಸಲು ಮುಂಬೈ ವಿಶೇಷ ನ್ಯಾಯಾಲಯವು ಮೂರು ವಾರಗಳ ಗಡುವುದು ನೀಡಿದೆ.
ಸೆಪ್ಟೆಂಬರ್ 24 ರೊಳಗೆ ಮಲ್ಯ ನೋತೀಸ್ ಗೆ ಉತ್ತರಿಸುವುದು ಅಗತ್ಯ. ಇದರ ನಂತರ ನ್ಯಾಯಾಲಯ ಮುಂದಿನ ವಿಚಾರಣೆ ಕುರಿತು ನಿರ್ಧರಿಸಲಿದೆ ಎಂದು ಕೋರ್ಟ್ ಸೂಚಿಸಿದೆ.
ಇದಕ್ಕೆ ಮುನ್ನ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಮಲ್ಯ ಪರ ವಕೀಲರು ಜಾರಿ ನಿರ್ದೇಶನಾಲಯ ನೊಟೀಸ್ ಗೆ ಉತ್ತರಿಸಲು ಕಾಲಾವಕಾಶಕ್ಕಾಗಿ ಮನವಿ ಮಾಡಿದ್ದರು.
ಆದರೆ ಪ್ರತಿವಾದಿ ವಕೀಲರು  ಕಾನೂನಿನ ಪ್ರಕಾರ, ಅರ್ಜಿಯ ಮೇಲಿನ ಪ್ರತಿಕ್ರಿಯೆಗಾಗಿ ಮಲ್ಯ ಅವರಿಗೆ ಹೆಚ್ಚಿನ ಕಾಲಾವಕಾಶ ನಿಡಬಾರದು ಎಂದು ವಾದಿಸಿದ್ದಾರೆ. ಫ್ಯೂಜಿಟಿವ್ ಪರ ವಕೀಲರು  ಕಾನೂನು ಆದೇಶದಂತೆ ನ್ಯಾಯಾಲಯವು ಒಂದು ವಾರಕ್ಕಿಂತಲೂ ಹೆಚ್ಚಿನ ಸಮಯವನ್ನು ನೀಡಲು ಅವಕಾಶವಿಲ್ಲ ಎಂದಿದ್ದಾರೆ.
ಈ ಹಿಂದೆ ಭಾರತೀಯ ಜೈಲುಗಳಲ್ಲಿನ ಮೂಲ ಸೌಕರ್ಯ ಅರಿಸ್ಥಿತಿ ಕುರಿತು ಆರೋಪಿಸಿದ್ದ ಮಲ್ಯ ವಾದಕ್ಕೆ ಪ್ರತಿಯಾಗಿ ಸಿಬಿಐ ಮುಂಬೈಯ ಆರ್ಥರ್ ರೋಡ್ ಜೈಲಿನಲ್ಲಿರುವ ಅಗತ್ಯ ಸೌಕರ್ಯಗಳ ಕುರಿತಾದ ವೀಡಿಯೋ ಒಂದನ್ನು ಲಂಡನ್ನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಲ್ಲಿ ಜೈಲಿನ ಸೆಲ್ ಸಂಖ್ಯೆ 12ರಲ್ಲಿ ಮಲ್ಯ ಅವರಿಗಾಗಿ ತಯಾರಾದ ಹೈಟೆಕ್ ಜೈಲು ವಿವರವನ್ನು ಈ ವೀಡಿಯೋಒಳಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com