

ಅಲಹಾಬಾದ್: ಉತ್ತರ ಪ್ರದೇಶದ ಅಲಹಾಬಾದಿನಲ್ಲಿ 10 ರೂಪಾಯಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ಒದಗಿಸುವ ಯೋಗಿ ಥಾಲಿ ಯೋಜನೆಗೆ ಮೇಯರ್ ಅಭಿಲಾಷ್ ಗುಪ್ತ ಚಾಲನೆ ನೀಡಿದ್ದಾರೆ.
ಇತರರ ಸಹಯೋಗದೊಂದಿಗೆ ಖಾಸಗಿ ವ್ಯಕ್ತಿ ಈ ವ್ಯವಸ್ಥೆಯನ್ನು ಆರಂಭಿಸಿದ್ದಾರೆ. ಈ ಯೋಜನೆ ಜಾರಿಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಲಾಷ್ ಗುಪ್ತಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರಲ್ಲಿ ಇದನ್ನು ಸ್ಥಾಪಿಸಲಾಗಿದ್ದು, ಬಡವರಿಗೆ 10 ರೂ. ನಲ್ಲಿ ಊಟ ಒದಗಿಸಲಾಗುತ್ತಿದೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಥಾಲಿ ಯೋಜನೆ ಆರಂಭಿಸಿರುವ ಖಾಸಗಿ ವ್ಯಕ್ತಿ ದಿಲೀಪ್ ಮಾತನಾಡಿ, ಯಾರೊಬ್ಬರು ಹೊಟ್ಟೆ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ. ಜನರಿಗಾಗಿ ಸೇವೆ ಮಾಡುತ್ತಿರುವ ಮುಖ್ಯಮಂತ್ರಿ ಅವರ ಹೆಸರನ್ನೆ ಇಡಲಾಗಿದೆ ಎಂದು ಹೇಳಿದರು.
ಅಲಹಾಬಾದಿನ ಅಟ್ಟರ್ಸುನಿಯಾ ಪ್ರದೇಶದಲ್ಲಿ ಯೋಗಿ ಥಾಲಿ ಯೋಜನೆ ಕಾರ್ಯಾರಂಭವಾಗಿದೆ.
Advertisement