ತೂತುಕುಡಿ ಸ್ಟೆರಿಲೈಟ್ ಪ್ರಕರಣ: ತ್ವರಿತ ವಿಚಾರಣೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

ತೂತುಕುಡಿಯಲ್ಲಿರುವ ವೇದಾಂತ ಸ್ಟೆರಿಲೈಟ್ ಘಟಕದ ಆಡಳಿತಾತ್ಮಕ ಕಚೇರಿಗೆ ಪ್ರವೇಶಿಸಲು ಸಂಸ್ಥೆಗೆ ಅವಕಾಶ ನೀಡಿರುವ ಎನ್ ಜಿ ಟಿ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ತೂತುಕುಡಿಯಲ್ಲಿರುವ ವೇದಾಂತ ಸ್ಟೆರಿಲೈಟ್ ಘಟಕದ ಆಡಳಿತಾತ್ಮಕ ಕಚೇರಿಗೆ ಪ್ರವೇಶಿಸಲು ಸಂಸ್ಥೆಗೆ ಅವಕಾಶ ನೀಡಿರುವ ಎನ್ ಜಿ ಟಿ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. 
ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕೆಂಬ ತಮಿಳುನಾಡು ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನ್ಯಾ.ದೀಪಕ್ ಮಿಶ್ರಾ, ನ್ಯಾ.ಎಎಂ ಖಾನ್ವಾಲಿಕರ್ ಹಾಗೂ ನ್ಯಾ. ಡಿವೈ ಚಂದ್ರಚೂಡ್ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ಮುಂದಿನವಾರಕ್ಕೆ ನಿಗದಿಪಡಿಸಿದೆ. 
ಮೇ.22 ರಂದು ಸ್ಟೆರಿಲೈಟ್ ಘಟಕದ ವಿರುದ್ಧ ತೂತುಕುಡಿಯಲ್ಲಿ ನಡೆದಿದ್ದ ಪ್ರಬಲ ಪ್ರತಿಭಟನೆಯ ನಂತರ ಸ್ಟೆರಿಲೈಟ್ ಘಟಕವನ್ನು ಸರ್ಕಾರ ಮುಚ್ಚಿಸಿತ್ತು. ಆದರೆ ಆಡಳಿತಾತ್ಮಕ ಕಚೇರಿಗೆ ಪ್ರವೇಶಿಸಲು ಸಂಸ್ಥೆಗೆ ಎನ್ ಜಿಟಿ ಅವಕಾಶ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com