ಈಶಾನ್ಯ ರಾಜ್ಯದಿಂದ ಸಿಜೆಐ ಆಗುತ್ತಿರುವ ಮೊದಲ ನ್ಯಾಯಾಧೀಶ?, ರಂಜನ್ ಗೋಗೋಯ್ ಹಿನ್ನೆಲೆ, ವಿವರ

ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಾಧೀಶರಾಗಿರುವ ರಂಜನ್ ಗೋಗೋಯ್ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶರಾಗಲಿದ್ದು ಅ.03 ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಈಶಾನ್ಯ ರಾಜ್ಯದಿಂದ ಸಿಜೆಐ ಆಗುತ್ತಿರುವ ಮೊದಲ ನ್ಯಾಯಾಧೀಶ, ರಂಜನ್ ಗೋಗೋಯ್ ಹಿನ್ನೆಲೆ, ವಿವರ
ಈಶಾನ್ಯ ರಾಜ್ಯದಿಂದ ಸಿಜೆಐ ಆಗುತ್ತಿರುವ ಮೊದಲ ನ್ಯಾಯಾಧೀಶ, ರಂಜನ್ ಗೋಗೋಯ್ ಹಿನ್ನೆಲೆ, ವಿವರ
ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಾಧೀಶರಾಗಿರುವ ರಂಜನ್ ಗೋಗೋಯ್ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶರಾಗಲಿದ್ದು ಅ.03 ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. 
ಈಶಾನ್ಯ ರಾಜ್ಯದಿಂದ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶರಾಗುತ್ತಿರುವ ಮೊದಲ ವ್ಯಕ್ತಿ ನ್ಯಾ.ರಂಜನ್ ಗೊಗೋಯ್ ಆಗಿದ್ದಾರೆ. 1954 ರ ನವೆಂಬರ್ 18 ರಂದು ಜನಿಸಿದ ನ್ಯಾ. ರಂಜನ್ ಗೊಗೋಯ್ ಗುವಾಹಟಿ ಹೈಕೋರ್ಟ್ ನಲ್ಲಿ ಪ್ರಮುಖವಾಗಿ ಅಭ್ಯಾಸ ಮಾಡಿದರು. 2001 ರ ಫೆ.28 ರಂದು ಗೋಗೋಯ್ ಅವರನ್ನು ಶಾಶ್ವತ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು. 
2011 ರ ಫೆ.12 ರಂದು ತರುಣ್ ಗೊಗೋಯ್ ಅವರು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ನ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡರು.  2012 ರಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡ ಗೊಗೋಯ್ ಅವರು ವಿಚಾರಣೆಗೆ ಬಂದಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಕ್ಕಾಗಿ ಅರ್ಜಿದಾರರಿಗೆ 5 ಲಕ್ಷ ದಂಡ ವಿಧಿಸಿದ್ದ ಮೊದಲ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದಾರೆ.
ಸರ್ಕಾರಿ ಜಾಹಿರಾತುಗಳಲ್ಲಿ ರಾಜಕಾರಣಿಗಳ ಫೋಟೊಗಳನ್ನು ಯದ್ವಾತದ್ವಾ ಬಳಕೆ ಮಾಡುವುದಕ್ಕೆ ಮೇ.2015 ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ನೀಡಿದ್ದವರು ರಂಜನ್ ಗೊಗೋಯ್ ಆಗಿದ್ದಾರೆ.  ಈ ವರ್ಷ ಅತಿ ಹೆಚ್ಚು ಸುದ್ದಿಯಾಗಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪತ್ರಿಕಾಗೋಷ್ಠಿಯಲ್ಲಿ ರಂಜನ್ ಗೋಗೋಯ್ ಸಹ ಇದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com