ಕಲಂ 35 (ಎ) ಇತ್ಯರ್ಥವಾಗುವರೆಗೂ ಜಮ್ಮು-ಕಾಶ್ಮೀರ ಪಂಚಾಯತ್ ಚುನಾವಣೆ ಬಹಿಷ್ಕಾರ- ನ್ಯಾಷನಲ್ ಕಾನ್ಫರೆನ್ಸ್

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ ಕಲಂ 35 (ಎ) ಇತ್ಯರ್ಥವಾಗುವರೆಗೂ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ನ್ಯಾಷನಲ್ ಕಾನ್ಪರೆನ್ಸ್ ಪಕ್ಷ ನಿರ್ಧರಿಸಿದೆ.
ಮಾಜಿ ಮುಖ್ಯಮಂತ್ರಿ ಪಾರೂಖ್ ಅಬ್ದುಲ್ಲಾ
ಮಾಜಿ ಮುಖ್ಯಮಂತ್ರಿ ಪಾರೂಖ್ ಅಬ್ದುಲ್ಲಾ

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ ಕಲಂ 35 (ಎ) ಇತ್ಯರ್ಥವಾಗುವರೆಗೂ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು  ನ್ಯಾಷನಲ್ ಕಾನ್ಪರೆನ್ಸ್ ಪಕ್ಷ ನಿರ್ಧರಿಸಿದೆ.

ಕಲಂ 35 ಎ ಬಗ್ಗೆ ಕೇಂದ್ರ ಹಾಗೂ ರಾಜ್ಯಸರ್ಕಾರ ಬಗೆಹರಿಸುವವರೆಗೂ ಪಂಚಾಯಿತಿ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಪರೆನ್ಸ್ ಪಾಲ್ಗೊಳ್ಳುವುದಿಲ್ಲ. ನ್ಯಾಯಾಲಯದ ಹೊರಗಡೆ ಕಲಂ 35 ಎ ರಕ್ಷಿಸಲು  ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು   ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಪಾರೂಖ್ ಅಬ್ದುಲ್ಲಾ ಹೇಳಿದ್ದಾರೆ.

 ಕಲಂ 35 ( ಎ) ಗೆ ಸಂಬಂಧಿಸಿದಂತೆ ಕೇಂದ್ರಸರ್ಕಾರ ಸ್ಪಷ್ಟನೆ ನೀಡಬೇಕು.  ನ್ಯಾಯಾಲಯದಲ್ಲಿ ವಿಳಂಬ ಪ್ರಕ್ರಿಯೆಗೆ ಪಂಚಾಯತ್ ಮತ್ತು ಮುನ್ಸಿಪಲ್ ಚುನಾವಣೆ ಬಳಸಿಕೊಳ್ಳುವುದು ಸಾಕಾಗುವುದಿಲ್ಲ ಎಂದು ಮತ್ತೋರ್ವ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು -ಕಾಶ್ಮೀರದಲ್ಲಿ ಈ ಮಾಸಾಂತ್ಯಕ್ಕೆ  ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆದಾಗ್ಯೂ, ಇನ್ನೂ ದಿನಾಂಕ ಪ್ರಕಟಗೊಂಡಿಲ್ಲ.

ಜಮ್ಮು-ಕಾಶ್ಮೀರ ಜನತೆಗೆ ವಿಶೇಷ ಹಕ್ಕು ಮತ್ತು ಸವಲತ್ತು ಒದಗಿಸುವ ಸಂವಿಧಾನದ  ಕಲಂ 35 ಎ 1954ರಲ್ಲಿ ರಾಷ್ಟ್ರ ಅಧ್ಯಕ್ಷರಿಂದ ಆದೇಶವಾಗಿದ್ದು, ಮಹಿಳೆಯರು ಆಸ್ತಿ ಮೇಲೆ ಹಕ್ಕು ಮತ್ತು  ಉತ್ತರಾಧಿಕಾರತ್ವವನ್ನು ಹೊಂದುವಂತಹ ವಿನಾಯಿತಿಯನ್ನು ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com