ಇಲ್ಲಿ ದ್ವೇಷವಿಲ್ಲ ಹಾಗಾಗಿ ಭಾರತೀಯರು ಇದನ್ನು ಪೂಜಿಸುತ್ತಾರೆ: ಮಾನಸ ಸರೋವರದಲ್ಲಿ ರಾಹುಲ್

"ಮಾನಸ ಸರೋವರ ಮನೋಹರವಾಗಿದೆ. ಬಹಳ ಶಾಂತವಾಗಿದ್ದು ನೆಮ್ಮದಿಯಿಂದ ಕೂಡಿದೆ.ಇಲ್ಲಿ ನಾವು ಎಲ್ಲವನ್ನೂ ಪಡೆಯುತ್ತೇವೆ, ಏನನ್ನೂ ಕಳೆದುಕೊಳ್ಳುವುದಿಲ್ಲ.
ಮಾನಸ ಸರೋವರ
ಮಾನಸ ಸರೋವರ
ಕಠ್ಮಂಡು: "ಮಾನಸ ಸರೋವರ ಮನೋಹರವಾಗಿದೆ. ಬಹಳ ಶಾಂತವಾಗಿದ್ದು ನೆಮ್ಮದಿಯಿಂದ ಕೂಡಿದೆ.ಇಲ್ಲಿ ನಾವು ಎಲ್ಲವನ್ನೂ ಪಡೆಯುತ್ತೇವೆ, ಏನನ್ನೂ ಕಳೆದುಕೊಳ್ಳುವುದಿಲ್ಲ. ಯಾರಾದರೂ ಇಲ್ಲಿನ ನೀರು ಕುಡಿಯಬಹುದು, ಇಲ್ಲಿ ದ್ವೇಷವಿಲ್ಲ. ಹಾಗಾಗಿಯೇ ಭಾರತೀಯರು ಮಾನಸ ಸರೋವರವನ್ನು ಪವಿತ್ರವೆಂದು ಕರೆದು ಇದರ ನೀರನ್ನು ಪೂಜಿಸುತ್ತೇವೆ." ರಾಹುಲ್ ಗಾಂಧಿ ಹೇಳಿದ್ದಾರೆ.
ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪ್ರವಾಸದಲ್ಲಿ ತಾವು ಕಂಡ ಚಿತ್ರಗಳನ್ನು ಸಾಮಾಜಿಕ ತಾಣ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ ವೇಳೆ ಅದೃಷ್ಟ ವಶಾತ್ ವಿಮಾನ ಅಪಘಾತದಿಂದ ಪಾರಾಗಿದ್ದ ರಾಹುಲ್ ತಾವು ಕೈಲಾಸ ಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದ್ದರು. ಇದರಂತೆ ಅವರು ಕಳೆದ ಅಗಸ್ಟ್ 31 ರಂದು ದೆಹಲಿಯಿಂದ ಪ್ರಯಾನಾ ಬೆಳೆಸಿದ್ದರು.
ಶಿವನ ಆಶೀರ್ವಾದ ಪಡೆಯುವುದಕ್ಕಾಗಿ ತಾನು ಸುಮಾರು 12 ದಿನಗಳ ಕಾಲ ಈ ಯಾತ್ರೆ ಕೈಗೊಳ್ಳುವುದಾಗಿ ಹೇಳಿದ್ದಾರೆ  ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದರು.ಭದ್ರತಾ ದೃಷ್ಟಿಯಿಂದ ರಾಹುಲ್ ಭೇಟಿ ನೀಡುವ ಸ್ಥಳ್ದ ನಕಾಶೆಯನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com