ತೆಲುಗು ಕವಿ ವರವರ ರಾವ್
ತೆಲುಗು ಕವಿ ವರವರ ರಾವ್

ಭಿನ್ನಮತೀಯರನ್ನು ತಡೆಯುತ್ತಿಲ್ಲ, ಸಮಾಜವನ್ನು ಅವ್ಯವಸ್ಥೆಯಿಂದ ರಕ್ಷಿಸುತ್ತಿದ್ದೇವೆ; ಸುಪ್ರೀಂ ಕೋರ್ಟ್ ಗೆ ಪುಣೆ ಪೊಲೀಸರು

ಭೀಮಾ-ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪೊಲೀಸರು ಬಂಧಿಸಿದ್ದ ಐವರು ...

ನವದೆಹಲಿ: ಭೀಮಾ-ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪೊಲೀಸರು ಬಂಧಿಸಿದ್ದ ಐವರು ಕಾರ್ಯಕರ್ತರು ರಾಜಕೀಯ ಮತ್ತು ಇತರ ಸಿದ್ಧಾಂತಗಳಲ್ಲಿ ಭಿನ್ನಮತ ಹೊಂದಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ಸುಪ್ರೀಂ ಕೋರ್ಟ್ ನಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಸಂಬಂಧ ನ್ಯಾಯಾಲಯದಲ್ಲಿ ಅಫಿಡವಿಟ್ಟು ಸಲ್ಲಿಸಿರುವ ಪುಣೆ ಪೊಲೀಸರು, ಈ ಐವರು ಹಿಂಸಾಕೃತ್ಯಕ್ಕೆ ಯೋಜನೆ ರೂಪಿಸಿ ತಯಾರಿ ನಡೆಸಿದ್ದು ಮಾತ್ರವಲ್ಲದೆ ಅತಿದೊಡ್ಡ ಮಟ್ಟದಲ್ಲಿ ಹಿಂಸಾಚಾರ ಸೃಷ್ಟಿಸಲು ಯೋಜನೆ ನಡೆಸುತ್ತಿದ್ದರು. ಈ ಮೂಲಕ ಸಮಾಜದ ಆಸ್ತಿಪಾಸ್ತಿಗಳನ್ನು ನಾಶಮಾಡಿ ಶಾಂತಿ ಕೆಡಿಸಲು ನೋಡುತ್ತಿದ್ದರು ಎಂದಿದ್ದಾರೆ.

ಪುಣೆಯ ಪೊಲೀಸ್ ಆಯುಕ್ತರು ಸುಪ್ರೀಂ ಕೋರ್ಟ್ ಗೆ ಈ ವಿವರ ನೀಡಿ ಅಫಿಡವಿಟ್ಟು ಸಲ್ಲಿಸಿದ್ದು ಈ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಎಫ್ಐಆರ್ ನಿಂದ ಇವರು ಮಾಡಿರುವ ತೀವ್ರ ಅಪರಾಧಗಳ ಗಂಭೀರತೆಯನ್ನು ಪರಿಗಣಿಸಬಹುದಾಗಿದೆ ಎಂದಿದ್ದಾರೆ.

ಈ ಕಾರ್ಯಕರ್ತರು ಹಿಂಸೆ ನಡೆಸಲು, ಶತ್ರುಗಳ ವಿರುದ್ಧ ಯೋಜಿತ ಹೊಂಚು ದಾಳಿಯನ್ನು ಮತ್ತು  ದಂಗೆಯನ್ನು ನಡೆಸಲು ಯೋಜಿಸುತ್ತಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com