ಪಂಜಾಬ್: ಸಾಲ ಮಾಡಿ 200 ರು. ಲಾಟರಿ ಟೆಕೆಟ್ ಕೊಂಡ ಕೂಲಿ ಕಾರ್ಮಿಕ ಈಗ ಕೋಟ್ಯಾಧಿಪತಿ!

ಬಡ ಕೂಲಿ ಕಾರ್ಮಿಕನೊರ್ವ 200 ರುಪಾಯಿ ಮೌಲ್ಯದ ಲಾಟರಿ ಟಿಕೆಟ್ ಕೊಂಡು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲೂದಿಯಾನ: ಬಡ ಕೂಲಿ ಕಾರ್ಮಿಕನೊರ್ವ 200 ರುಪಾಯಿ ಮೌಲ್ಯದ ಲಾಟರಿ ಟಿಕೆಟ್ ಕೊಂಡು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. 
ಪಂಜಾಬ್ ನ ಸಂಗ್ರೂರ್ ಜಿಲ್ಲೆಯ ಮಾಂಡ್ವಿ ಗ್ರಾಮದ ಮನೋಜ್ ಕುಮಾರ್ ಎಂಬುವರು ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು ಲಾಟರಿ ಟಿಕೆಟ್ ಒಂದನ್ನು ಖರೀದಿಸಿದ್ದಾರೆ. ಅದೃಷ್ಟ ಖುಲಾಯಿಸಿದ್ದು ಲಾಟರಿಯಲ್ಲಿ 1.5 ಕೋಟಿ ರುಪಾಯಿ ನಗದು ಬಹುಮಾನ ಬಂದಿದೆ. 
2018ರ ಪಂಜಾಬ್ ರಾಜ್ಯ ರಾಖಿ ಬಂಪರ್ ಲಾಟರಿಯನ್ನು ಆಗಸ್ಟ್ 29ರಂದು ಘೋಷಿಸಿದ್ದು ಇದರಲ್ಲಿ ಇಬ್ಬರಿಗೆ 1.5 ಕೋಟಿ ರುಪಾಯಿ ನಗದು ಬಹುಮಾನ ಬಂದಿದೆ. ಇಬ್ಬರ ಪೈಕಿ ಮನೋಜ್ ಕುಮಾರ್ ಒಬ್ಬರಾಗಿದ್ದಾರೆ. 
ಬುಧವಾರ ಮನೋಜ್ ಕುಮಾರ್ ಪಂಜಾಬ್ ಲಾಟರಿ ನಿರ್ದೇಶಕರನ್ನು ಭೇಟಿ ಮಾಡಿ ನಗದು ಬಹುಮಾನವನ್ನು ಸ್ವೀಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com