ಸೆಕ್ಷನ್ 377 ತೀರ್ಪು: 'ಕಾಮ'ನಬಿಲ್ಲಿನೊಂದಿಗೆ ಸಲಿಂಗಿಗಳ ಸಂಭ್ರಮ

ಭಾರತದಲ್ಲಿ ಸಲಿಂಗ ಕಾಮ ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್‌ 377 ಅನ್ನು ರದ್ದುಗೊಳಿಸಿ...
ಎಲ್ ಜಿಬಿಟಿಕ್ಯು ಸದಸ್ಯರ ಸಂಭ್ರಮ
ಎಲ್ ಜಿಬಿಟಿಕ್ಯು ಸದಸ್ಯರ ಸಂಭ್ರಮ
Updated on
ನವದೆಹಲಿ: ಭಾರತದಲ್ಲಿ ಸಲಿಂಗ ಕಾಮ ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್‌ 377 ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದ್ದು, ಸಲಿಂಗಿಗಳು, ದ್ವಿಲಿಂಗಿಗಳು ಮತ್ತು ಲಿಂಗಪರಿವರ್ತನೆ ಮಾಡಿಕೊಂಡ(ಎಲ್ ಜಿಬಿಟಿಕ್ಯು) ಸಮುದಾಯದ ಸಂಭ್ರಮ ಮುಗಿಲು ಮುಟ್ಟಿದೆ.
ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸುತ್ತಿದ್ದಂತೆ ಎಲ್ ಜಿಬಿಟಿಕ್ಯು ಸದ್ಯಸ್ಯರು ರೇನ್ ಬೋ ಧ್ವಜದೊಂದಿಗೆ ರಸ್ತೆ ಬಂದು ಪರಸ್ಪರ ಅಪ್ಪಿಕೊಂಡು, ಕುಣಿದು ಕುಪ್ಪಳಿಸಿದರು. 
ಎಲ್ ಜೆಬಿಟಿಕ್ಯು ಸದಸ್ಯರಿಗೆ ಬಾಲಿವುಡ್ ತಾರೆಯರು, ಬರಹಗಾರರು, ವಕೀಲರು, ಶಿಕ್ಷಕರು ಮತ್ತು ರಾಜಕಾರಣಿಗಳು ಸಹ ಬೆಂಬಲ ನೀಡಿದ್ದು, ಸಲಿಂಗಿಗಗಳ ಬಹುದಿನಗಳ ಬೇಡಿಕೆ ಈಡೇರಿದೆ.
ಲೈಂಗಿಕ ನಿಲುವು ಸ್ವಾಭಾವಿಕ ಮತ್ತು ನೈಸರ್ಗಿಕ. ಅದು ಯಾರ ಮೇಲೆ ಸೆಳೆತ ಉಂಟಾಗುತ್ತದೆ ಎಂಬುದು ಅವನು ಅಥವಾ ಅವಳ ನಿಯಂತ್ರಣದಲ್ಲಿರುವುದಿಲ್ಲ. ಯಾವುದೇ ರೀತಿಯ ನಿಯಂತ್ರಣವೂ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com