'ದಲಿತ' ಪದ ಬಳಕೆ ನಿಷೇಧ ಪ್ರಶ್ನಿಸಿ 'ಸುಪ್ರೀಂ' ಮೊರೆ ಹೋಗಲಿರುವ ಕೇಂದ್ರ ಸಚಿವ

ದಲಿತ' ಎಂಬ ಪದ ಬಳಕೆ ಮಾಡಬಾರದೆಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ...
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಥವಾಲೆ
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಥವಾಲೆ

ನವದೆಹಲಿ: 'ದಲಿತ' ಎಂಬ ಪದ ಬಳಕೆ ಮಾಡಬಾರದೆಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಾಧ್ಯಮಗಳಿಗೆ ತಡೆಹಿಡಿರುವುದನ್ನು ಪ್ರಶ್ನಿಸಿ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ರಾಮದಾಸ್ ಅಥಾವಾಲೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರ್ ಪಿಐ ಮುಖ್ಯಸ್ಥ ಕೇಂದ್ರ ಸಚಿವ ರಾಮದಾಸ್ ಅಥವಾಲೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಪರವಾಗಿ, ದಲಿತ ಪದ ಬಳಕೆ ಅಪರಾಧ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿ ಅದನ್ನು ಮಾಧ್ಯಮಗಳು ಬಳಸಬಾರದೆಂದು ನೀಡಿರುವ ಆದೇಶವನ್ನು ಎತ್ತಿಹಿಡಿದಿರುವ ಮುಂಬೈ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ದಲಿತ ಪದ ಬಳಕೆಗೆ ನಿಷೇಧ ತರುವುದು ತಪ್ಪು ನಿರ್ಧಾರ ಎಂದು ಅವರು ಹೇಳಿದ್ದಾರೆ.

ನಾವು ಕೋರ್ಟ್ ತೀರ್ಮಾನವನ್ನು ಗೌರವಿಸುತ್ತೇವೆ ಮತ್ತು ನಮ್ಮ ಸಚಿವಾಲಯ  ಕೂಡ ಅಧಿಕೃತ ದಾಖಲೆಗಳಲ್ಲಿ ದಲಿತ ಪದ ಬಳಕೆ ಬದಲಾಗಿ ಪರಿಶಿಷ್ಟ ಜಾತಿ ಎಂದು ಬಳಸಿ ಎಂದು ಆದೇಶ ಹೊರಡಿಸಿದೆ. ಮಾಧ್ಯಮಗಳಿಗೆ ಕೂಡ ಅದನ್ನೇ ಹೇಳಿದೆ. ಆದರೆ ಮಾಧ್ಯಮಗಳನ್ನು ಆ ರೀತಿ ತಡೆಯಲು ಸಾಧ್ಯವಿಲ್ಲ ಎಂದು ಅಥವಾಲೆ ಹೇಳುತ್ತಾರೆ.

ದಲಿತ ಸಮುದಾಯದವರಿಗೆ ತಮ್ಮನ್ನು ಹರಿಜನ ಎಂದು ಸಂಭೋದಿಸುವುದರ ಬಗ್ಗೆ ಆಕ್ಷೇಪವಿತ್ತು. ಆ ಶಬ್ದವನ್ನು ಮೊದಲ ಬಾರಿಗೆ ತಂದವರು ಮಹಾತ್ಮಾ ಗಾಂಧಿಯವರು. ಆ ಶಬ್ದವನ್ನು ಕೂಡ ನಿಷೇಧಿಸಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com