ನಗೌನ್ ಗ್ಯಾಂಗ್ ರೇಪ್, ಹತ್ಯೆ ಪ್ರಕರಣ: 19 ವರ್ಷದ ಅಪರಾಧಿಗೆ ಮರಣ ದಂಡನೆ ಶಿಕ್ಷೆ

ಅಸ್ಸಾಂ ನ ನಗೌನ್ ನಲ್ಲಿ ನಡೆದಿದ್ದ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿ ಹುಸೇನ್ (19) ಗೆ ಅಸ್ಸಾಂ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.
ನಗೌನ್ ಗ್ಯಾಂಗ್ ರೇಪ್, ಹತ್ಯೆ ಪ್ರಕರಣ: 19 ವರ್ಷದ ಅಪರಾಧಿಗೆ ಮರಣ ದಂಡನೆ ಶಿಕ್ಷೆ
ನಗೌನ್ ಗ್ಯಾಂಗ್ ರೇಪ್, ಹತ್ಯೆ ಪ್ರಕರಣ: 19 ವರ್ಷದ ಅಪರಾಧಿಗೆ ಮರಣ ದಂಡನೆ ಶಿಕ್ಷೆ
Updated on: 
ಅಸ್ಸಾಂ ನ ನಗೌನ್ ನಲ್ಲಿ ನಡೆದಿದ್ದ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿ ಹುಸೇನ್ (19) ಗೆ ಅಸ್ಸಾಂ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. 
ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾ. ರೀತಾ ಕರ್, ಅತ್ಯಾಚಾರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಾಕಿರ್ ಹುಸೇನ್ ಗೆ ಮರಣ ದಂಡನೆ ಶಿಕ್ಷೆ ಹಾಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದಾರೆ.  ಹತ್ಯೆ ಮಾಡಿದ್ದಕ್ಕಾಗಿ ಪೋಸ್ಕೋ ಕಾಯ್ದೆಯಡಿ ಮರಣ ದಂಡನೆ ಶಿಕ್ಷೆ ವಿಧಿಸಿದ್ದರೆ, ಅತ್ಯಾಚಾರವೆಸಗಿದ್ದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 
ಮಾ.23 ರಂದು ಅಪ್ರಾಪ್ತ ಬಾಲಕಿಯ ಮೇಲೆ 12 ವರ್ಷದ ಆಕೆಯ ಸಹಪಾಠಿಗಳು, 11 ವರ್ಷದ ಸೋದರ ಸಂಬಂಧಿ, 19 ವರ್ಷದ ಜಾಕಿರ್ ಹುಸೇನ್  ಗ್ಯಾಂಗ್ ರೇಪ್ ನಡೆಸಿ ಆಕೆಯನ್ನು ಸುಟ್ಟು ಹತ್ಯೆ ಮಾಡಿದ್ದರು.  ಜಾಕಿರ್ ಹುಸೇನ್ ಗೆ ಮರಣ ದಂಡನೆ ವಿಧಿಸಲಾಗಿದ್ದರೆ. ಇನ್ನಿಬ್ಬರು ಅಪ್ರಾಪ್ತ ಅಪರಾಧಿಗಳನ್ನು ಬಾಲಾಪರಾಧಿಗಳು ನ್ಯಾಯಮಂಡಳಿಯಲ್ಲಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com