ಮಹಾತ್ಮ ಗಾಂಧಿ ಮತ್ತು ನೆಹರು ಅವರ ಪ್ರಜಾಪ್ರಭುತ್ವ ಈಗ ಅಸ್ಥಿತ್ವದಲ್ಲಿಲ್ಲ: ಫಾರೂಕ್ ಅಬ್ದುಲ್ಲಾ

: ರಾಜಕಾರಣ ಕೆಟ್ಟದಲ್ಲ, ಆದರೆ ರಾಜಕಾರಣಿಗಳು ಕೆಟ್ಟವರಾಗಿರಬಹುದು ಎಂದು ಜಮ್ಮು ಕಾಶ್ಮೀರ ಮಾಜಿ ಸಿಎಂ ಫರಾಕ್ ಅಬ್ದುಲ್ಲಾ ಹೇಳಿದ್ದಾರೆ...
ಫಾರೂಕ್  ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ
ನವದೆಹಲಿ: ರಾಜಕಾರಣ ಕೆಟ್ಟದಲ್ಲ, ಆದರೆ ರಾಜಕಾರಣಿಗಳು ಕೆಟ್ಟವರಾಗಿರಬಹುದು ಎಂದು ಜಮ್ಮು ಕಾಶ್ಮೀರ ಮಾಜಿ ಸಿಎಂ ಫರಾಕ್ ಅಬ್ದುಲ್ಲಾ  ಹೇಳಿದ್ದಾರೆ.
ದೆಹಲಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರ ನಡೆದ ಎಲ್ಲಾ ಚುನಾವಣೆಗಳು ಭಾರತವನ್ನು ಒಂದು  ಗೂಡಿಸುವ ಬದಲು ವಿಭಜಿಸುತ್ತಲೇ ಬಂದಿವೆ, ರಾಜಕೀಯ ಕೆಟ್ಟದ್ದಲ್ಲ, ರಾಜಕಾರಣಿಗಳು ಕೆಟ್ಟವರು ಎಂದು ಹೇಳಿದ್ದಾರೆ,
ನಮ್ಮಲ್ಲಿ ಕೆಲವರು ಜನರ  ಸೇವೆ ಮಾಡಲು ರಾಜಕೀಯಕ್ಕೆ ಬರುತ್ತಾರೆ, ಇನ್ನೂ ಕೆಲವರು ಹಣ ಮಾಡಲು ಬರುತ್ತಾರೆ, ಪ್ರತಿ ಚುನಾವಣೆಯೂ ಭಾರತವನ್ನು ಒಗ್ಗೂಡಿಸುವ ಬದಲುಪ ವಿಭಜಿಸುತ್ತಲೇ ಬರುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಮಸೀದಿ ದೇವಾಲಯಗಳಿಗಾಗಿ ನಾವು ಕಿತ್ತಾಡುತ್ತಿದ್ದೇವೆ,ಭಯ ಮತ್ತು ಸುಳ್ಳಿನ ನಡುವೆ ಬದುಕುತ್ತಿದ್ದೇವೆ, ನಾವು ಪ್ರಾಮಾಣಿಕವಾಗಿದ್ದರೇ ಗೆಲ್ಲಲು ಸಾಧ್ಯವಿಲ್ಲ, ಜನರಿಗಾಗಿ ನಾವು ಹೋರಾಟ ಮಾಡುತ್ತಿಲ್ಲ ಎಂದು ಹೇಳಿದ್ದಾರೆ,
ಮಹಾತ್ಮ ಗಾಂಧಿ ಮತ್ತು ಜವಹರ್ ಲಾಲು ನೆಹರು ಅವರ ಪ್ರಜಾಪ್ರಭುತ್ವ ಈಗ ಅಸ್ಥಿತ್ವದಲ್ಲಿಲ್ಲ ಎಂದು ಮತ್ತೊಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com