ಮುಂಬೈ: ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಜಾಮೀನು ಅರ್ಜಿಯನ್ನು ಸಿಬಿಐ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ..ಅನಾರೋಗ್ಯ ಮತ್ತು ಜೈಲಿನಲ್ಲಿ ಜೀವ ಬೆದರಿಕೆ ಕಾರಣ ನೀಡಿ ಕಳೆದ ಆಗಸ್ಟ್ ಜಾಮೀನು ಕೋರಿ ಇಂದ್ರಾಣಿ ಮುಖರ್ಜಿ ಅರ್ಜಿ ಸಲ್ಲಿಸಿದ್ದರು..ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆಸಿ ಜಗದಾಳೆ ಅವರು, ಹೊರಗೆ ಇರುವುದಕ್ಕಿಂತ ಜೈಲಿನಲ್ಲಿರುವುದು ಹೆಚ್ಚು ಸುರಕ್ಷಿತ ಎಂದು ಹೇಳಿದ್ದಾರೆ..ಇನ್ನು ಇಂದ್ರಾಣಿ ಮುಖರ್ಜಿಯನ್ನು ಜೈಲಿನ ಸೆಲ್ ನಲ್ಲೇ ಭದ್ರತೆಯಿಂದ ಇಡಬೇಕು ಮತ್ತು ದಿನದ 24 ಗಂಟೆ ಭದ್ರತೆ ಒದಗಿಸಬೇಕು ಎಂಬ ಸಿಬಿಐ ವಾದವನ್ನು ಕೋರ್ಟ್ ಪುರಸ್ಕರಿಸಿದೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos