ಹುಡುಗಿಯನ್ನು ಎತ್ತಾಕೊಂಡ್ ಬರ್ತೀನಿ ಎಂದಿದ್ದ ಬಿಜೆಪಿ ಶಾಸಕನನ್ನು ಖಿಲ್ಜಿಗೆ ಹೋಲಿಸಿದ ಶಿವಸೇನೆ

ನೀವು ಇಷ್ಟಪಟ್ಟ ಹುಡುಗಿ ನಿಮ್ಮ ಪ್ರೀತಿಯನ್ನು ನಿರಾಕರಿಸಿದರೆ ನನಗೆ ತಿಳಿಸಿ ಅವಳನ್ನು ಎತ್ತಾಕೊಂಡ್ ಬಂದು ನಿಮಗೆ ಒಪ್ಪಿಸುತ್ತೇನೆ ಎಂದು ಹೇಳಿದ್ದ ಬಿಜೆಪಿ ಶಾಸಕನನ್ನು ಶಿವಸೇನೆ ಅಲ್ಲಾ ಉದ್ದೀನ್ ಖಿಲ್ಜಿಗೆ ಹೋಲಿಕೆ ಮಾಡಿದೆ.
Shiv Sena compares BJP MLA Ram Kadam to Khilji over his anti-women remarks
Shiv Sena compares BJP MLA Ram Kadam to Khilji over his anti-women remarks
Updated on
ಮುಂಬೈ: ನೀವು ಇಷ್ಟಪಟ್ಟ ಹುಡುಗಿ ನಿಮ್ಮ ಪ್ರೀತಿಯನ್ನು ನಿರಾಕರಿಸಿದರೆ ನನಗೆ ತಿಳಿಸಿ ಅವಳನ್ನು ಎತ್ತಾಕೊಂಡ್ ಬಂದು ನಿಮಗೆ ಒಪ್ಪಿಸುತ್ತೇನೆ ಎಂದು ಹೇಳಿದ್ದ ಬಿಜೆಪಿ ಶಾಸಕನನ್ನು ಶಿವಸೇನೆ ಅಲ್ಲಾ ಉದ್ದೀನ್ ಖಿಲ್ಜಿಗೆ ಹೋಲಿಕೆ ಮಾಡಿದೆ. 
ತನ್ನ ಶಾಸಕನ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದ ಬಿಜೆಪಿಯನ್ನೂ ಶಿವಸೇನೆ ಟೀಕಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಒಂದೆಡೆ ತ್ರಿವಳಿ ತಲಾಖ್ ನಿಂದ ಮುಸ್ಲಿಂ ಮಹಿಳೆಯರಿಗೆ ಭದ್ರತೆ ನೀಡಬೇಕೆಂದು ಪ್ರಯತ್ನಿಸುತ್ತಿದ್ದರೆ, ಇತ್ತ ಬಿಜೆಪಿ ಶಾಸಕರು ಮಹಿಳೆಯರಲ್ಲಿ ಭಯ ಮೂಡಿಸುತ್ತಿದ್ದಾರೆ ಎಂದು ಶಿವಸೇನೆ ಅಸಮಾಧಾನ ಹೊರಹಾಕಿದೆ. 
ಖಿಲ್ಜಿ ಕೈಗೆ ಸಿಗಬಾರದೆಂದು ರಾಣಿ ಪದ್ಮಿನಿ ಜೊಹಾರ್ ಮಾಡಿಕೊಂಡು ಮೃತಪಟ್ಟಳು, ಆ ಕಿಚ್ಚು ಇಂದಿಗೂ ಖಿಲ್ಜಿಯಂತಹ ಪುರುಷರ ವಿರುದ್ಧ ನಿಲ್ಲುವುದಕ್ಕೆ ಮಹಿಳೆಯರಿಗೆ ಪ್ರೇರಣೆ ನೀಡುತ್ತಿದೆ ಎಂದು ಶಿವಸೇನೆ ಹೇಳಿದೆ.  ಮಹಾರಾಷ್ಟ್ರದ ಬಿಜೆಪಿಯಲ್ಲೂ ಓರ್ವ ಖಿಲ್ಜಿ ಇದ್ದು, 
ನೀವು ಇಷ್ಟಪಟ್ಟ ಹುಡುಗಿ ನಿಮ್ಮ ಪ್ರೀತಿಯನ್ನು ನಿರಾಕರಿಸಿದರೆ ನನಗೆ ತಿಳಿಸಿ ಅವಳನ್ನು ಎತ್ತಾಕೊಂಡ್ ಬಂದು ನಿಮಗೆ ಒಪ್ಪಿಸುತ್ತೇನೆ ಹೇಳಿದ್ದಾರೆ. ಇಂತಹ ವ್ಯಕ್ತಿಗಳು ಶಿವಾಜಿ ಮಹಾರಾಜರ ಹೆಸರನ್ನು ಬಳಸಿಕೊಂಡು ಅಧಿಕಾರಕ್ಕೆ ಬರುತ್ತಾರೆ. ಆದರೆ ಬಿಜೆಪಿ ಮಾತ್ರ ಈ ಬಗ್ಗೆ ಮೌನ ವಹಿಸಿದೆ ಎಂದು ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com