100ರ ಸನಿಹಕ್ಕೆ ಪೆಟ್ರೋಲ್ ಬೆಲೆ! ಮುಂಬೈಯಲ್ಲಿ ಲೀಟರ್ ಪೆಟ್ರೋಲ್ ರು.88, ಡೀಸೆಲ್ ರು.76. 98

ತೈಲ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ದಾಖಲೆ ಮಟ್ಟದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 80. 39 ರೂ ಹಾಗೂ ಡೀಸೆಲ್ 72. 51 ಪೈಸೆ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ :  ತೈಲ ಬೆಲೆಯಲ್ಲಿ ಮತ್ತೆ  ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ದಾಖಲೆ ಮಟ್ಟದಲ್ಲಿ  ಪ್ರತಿ ಲೀಟರ್  ಪೆಟ್ರೋಲ್  80. 39 ರೂ ಹಾಗೂ ಡೀಸೆಲ್ 72. 51 ಪೈಸೆ ಆಗಿದೆ.

ಭಾರತೀಯ ತೈಲ ನಿಗಮದ ಪ್ರಕಾರ ದೆಹಲಿಯಲ್ಲಿ  ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 39 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 44 ಪೈಕಿ ಏರಿಕೆಯಾಗಿದೆ.

ಮತ್ತೊಂದೆಡೆ ಮುಂಬೈಯಲ್ಲಿ ಲೀಟರ್  ಪೆಟ್ರೋಲ್ 87. 77 ರೂ. ಹಾಗೂ ಡೀಸೆಲ್ 76. 98 ರೂ. ಆಗಿದೆ. ಪೆಟ್ರೋಲ್ , ಡೀಸೆಲ್ ಬೆಲೆ ಗಗನಮುಖಿಯಾಗಿ ಏರಿಕೆಯಾಗಿರುವುದರಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಲೆ ಇದೆ. ಪೆಟ್ರೋಲ್ ಹಾಗೂ ಡೀಸೆಲ್ ಗಾಗಿ ಬ್ಯಾಂಕಿನಿಂದ ಸಾಲ ಪಡೆಯುವಂತಹ ಪರಿಸ್ಥಿತಿ ಎದುರಾಗಿದೆ.

ಈ ಮಧ್ಯೆ  ಪೆಟ್ರೋಲ್, ಡೀಸೆಲ್  ಬೆಲೆ ಏರಿಕೆ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಸ್ಥಳೀಯ ಜನರು ಒತ್ತಾಯಿಸಿದ್ದಾರೆ.

ಸದ್ಯದಲ್ಲಿಯೇ ಪೆಟ್ರೋಲ್ ಬೆಲೆ 100ರ ಸಮೀಪಕ್ಕೆ ದಾವಿಸಲಿದ್ದು, ಶ್ರೀಸಾಮಾನ್ಯರ ಬದುಕು ಆಯೋಮಯವಾಗಲಿದೆ. ಸರ್ಕಾರ ಕೂಡಲೇ ಕೆಲ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಅಮೆರಿಕಾದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಿನ್ನೆಲೆಯಲ್ಲಿ ದೇಶದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದೆ ಸರ್ಕಾರ ಹೇಳುತ್ತಿದ್ದರೆ  ತೈಲ ಬೆಲೆ ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಬೆಂಗಳೂರಿನಲ್ಲಿ ಲೀ. ಪೆಟ್ರೋಲ್ ಬೆಲೆ 82. 69 ರೂ ಆಗಿದ್ದರೆ,  ಡೀಸೆಲೆ ಬೆಲೆ  74. 39 ಪೈಸೆ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com