ಸಕ್ರಿಯ ರಾಜಕೀಯಕ್ಕೆ ಸೇರಲ್ಲ, ಯಾವುದೇ ಪಕ್ಷದ ಪರ ಪ್ರಚಾರವಿಲ್ಲ: ಪ್ರಶಾಂತ್ ಕಿಶೋರ್

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷದ ಪರವೂ ವಯಕ್ತಿಕವಾಗಿ ಪ್ರಚಾರ ನಡೆಸುವುದಿಲ್ಲ ಎಂದೂ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ...
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್
ಹೈದರಾಬಾದ್: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷದ ಪರವೂ ವಯಕ್ತಿಕವಾಗಿ ಪ್ರಚಾರ ನಡೆಸುವುದಿಲ್ಲ ಎಂದೂ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಸದ್ಯ ತಮ್ಮದೇ ಸ್ವಂತ ಉದ್ಯಮ ನಡೆಸುತ್ತಿರುವ ಪ್ರಶಾಂತ್ ಕಿಶೋರ್ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷದ ಪರ ಗುರುತಿಸಿಕೊಳ್ಳುವುದಿಲ್ಲ ನನ್ನ ಮತ್ತು ಭಾರತೀಯ ರಾಜಕೀಯ ನೀತಿ ಸಮಿತಿ ನಡುವೆ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.
ಐ ಪ್ಯಾಕ್ ಸಂಸ್ಥಾಪಕ  ಕಿಶೋರ್, ಕಳೆದ ಎರಡು ವರ್ಷಗಳಿಂದ ನಾನು ಇದರಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ, ಈ ಹುದ್ದೆಯಿಂದ ನಾನು ನಿರ್ಗಮಿಸುತ್ತೇನೆ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ. ಹಲವು ಪಕ್ಷಗಳ ಪರ ಚುನಾವಣಾ ಕಾರ್ಯ ತಂತ್ರರೂಪಿಸಿದ್ದಾರೆ, 
2012 ರಲ್ಲಿ  ಗುಜರಾತ್ ವಿಧಾನಸಭೆ ಚುನಾವಣೆ ವೇಳೆ  ಹಾಗೂ 2014 ರ ಲೋಕಸಭೆ ಚುನಾವಣೆಯಲ್ಲಿ  ಮೋದಿ ಪರ ಕೆಲಸ ಮಾಡಿದ್ದಾರೆ,  ಸದ್ಯ ಆಂಧ್ರ ಪ್ರದೇಶದ ವಿಧಾನ ಸಭೆ ಚುನಾವಣೆಯಲ್ಲಿ ವೈಎಸ್ ಆರ್ ಸಿಪಿ ಪರ ಕೆಲಸ ಮಾಡುತ್ತಿದ್ದಾರೆ, ಒಂದು ವೇಳೆ ನಾನು ರಾಜಕೀಯಕ್ಕೆ ಬಂದರೇ ಪಿಎಂ ನರೇಂದ್ರ ಮೋದಿ ನನ್ನನ್ನು ಹೆಚ್ಚು ಸ್ವಾಗತಿಸುತ್ತಾರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com