ಕ್ರೈಸ್ತ ಸಂನ್ಯಾಸಿನಿ ವಿರುದ್ಧ ಆಕ್ಷೇಪಾರ್ಹ ಭಾಷೆ: ಕೇರಳ ಶಾಸಕನಿಗೆ ಮಹಿಳಾ ಆಯೋಗದಿಂದ ನೋಟೀಸ್
ದೇಶ
ಕ್ರೈಸ್ತ ಸಂನ್ಯಾಸಿನಿ ವಿರುದ್ಧ ಆಕ್ಷೇಪಾರ್ಹ ಭಾಷೆ: ಕೇರಳ ಶಾಸಕನಿಗೆ ಮಹಿಳಾ ಆಯೋಗದಿಂದ ನೋಟೀಸ್
ಬಿಷಪ್ ನಿಂದ ಅತ್ಯಾಚಾರಕ್ಕೊಳಗಾಗಿರುವ ಕ್ರೈಸ್ತ ಸಂನ್ಯಾಸಿನಿ ಬಗ್ಗೆ ಆಕ್ಷೇಪಾರ್ಹ ಭಾಷೆ ಬಳಸಿದ್ದ ಕೇರಳ ಶಾಸಕ ಪಿಸಿ ಜಾರ್ಜ್ ಗೆ ಕೇಂದ್ರ ಮಹಿಳಾ ಆಯೋಗ ನೋಟೀಸ್ ಜಾರಿಗೊಳಿಸಿದೆ.
ಬಿಷಪ್ ನಿಂದ ಅತ್ಯಾಚಾರಕ್ಕೊಳಗಾಗಿರುವ ಕ್ರೈಸ್ತ ಸಂನ್ಯಾಸಿನಿ ಬಗ್ಗೆ ಆಕ್ಷೇಪಾರ್ಹ ಭಾಷೆ ಬಳಸಿದ್ದ ಕೇರಳ ಶಾಸಕ ಪಿಸಿ ಜಾರ್ಜ್ ಗೆ ಕೇಂದ್ರ ಮಹಿಳಾ ಆಯೋಗ ನೋಟೀಸ್ ಜಾರಿಗೊಳಿಸಿದೆ.
ಕ್ರೈಸ್ತ ಸಂನ್ಯಾಸಿನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುವುದೂ ಅಲ್ಲದೇ ಘಟನೆ ನಡೆದ ಕೂಡಲೇ ಏಕೆ ಆಕೆ ಇದನ್ನು ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿದ್ದರು ಪಕ್ಷೇತರ ಶಾಸಕ ಪಿಸಿ ಜಾರ್ಜ್, ಶಾಸಕರ ಹೇಳಿಕೆ ತೀವ್ರವಾಗಿ ನೋವುಂಟು ಮಾಡಿದೆ ಎಂದು ಹೇಳಿರುವ ಎನ್ ಸಿ ಡಬ್ಲ್ಯು ಶಾಸಕರಿಗೆ ನೋಟೀಸ್ ಜಾರಿಗೊಳಿಸಿದೆ.
ಬೇಜವಾಬ್ದಾರಿ ಹೇಳಿಕೆ ನೀಡಿರುವ ನೀವು ವಿವರಣೆ ನೀಡಬೇಕು ಹಾಗೂ ಸೆ.20 ರೊಳಗೆ ಆಯೋಗದೆದುರು ಹಾಜರಾಗಬೇಕೆಂದು ಎನ್ ಸಿ ಡಬ್ಲ್ಯು ಅಧ್ಯಕ್ಷರಾದ ರೇಖಾ ಶರ್ಮಾ ಹೇಳಿದ್ದಾರೆ. ಉನ್ನತ ಹುದ್ದೆಯಲ್ಲಿರುವವರು ಈ ರೀತಿಯ ಹೇಳಿಕೆ ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ಎನ್ ಸಿಡಬ್ಲ್ಯು ಅಧ್ಯಕ್ಷರು ಹೇಳ್ದಿದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ