ಪಿಡಿಪಿಯಿಂದಲೂ ಜಮ್ಮು-ಕಾಶ್ಮೀರ ಸ್ಥಳೀಯ ಸಂಸ್ಥೆ ಚುನಾವಣೆ ಬಹಿಷ್ಕಾರ!

ಮುಂದಿನ ತಿಂಗಳು ಜಮ್ಮು-ಕಾಶ್ಮೀರದಲ್ಲಿ ನಡೆಯಲಿರುವ ಪಂಚಾಯತ್, ಹಾಗೂ ನಗರ ಸ್ಥಳೀಯ ಸಂಸ್ಥೆಯನ್ನು ಚುನಾವಣೆಯನ್ನು ಪಿಡಿಪಿ ಪಕ್ಷವೂ ಬಹಿಷ್ಕರಿಸಿದೆ.
ಮೆಹಬೂಬಾ ಮುಪ್ತಿ,
ಮೆಹಬೂಬಾ ಮುಪ್ತಿ,
ಶ್ರೀನಗರ: ಮುಂದಿನ ತಿಂಗಳು ಜಮ್ಮು-ಕಾಶ್ಮೀರದಲ್ಲಿ ನಡೆಯಲಿರುವ ಪಂಚಾಯತ್,  ಹಾಗೂ ನಗರ ಸ್ಥಳೀಯ ಸಂಸ್ಥೆಯನ್ನು ಚುನಾವಣೆಯನ್ನು  ಪಿಡಿಪಿ ಪಕ್ಷವೂ ಬಹಿಷ್ಕರಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಪ್ತಿ,  ಜಮ್ಮು-ಕಾಶ್ಮೀರದ ಶ್ರೇಷ್ಠತೆ ಎತ್ತಿ ಹಿಡಿಯುವ ಸಂವಿಧಾನದ  35 ಎ ಪರಿಚ್ಚೇದ  ಕತ್ತಿ ನಮ್ಮ ತಲೆ ಮೇಲೆ ತೂಗು ಹಾಕುತ್ತಿದೆ.ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಚುನಾವಣೆ ನಡೆಯುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಚುನಾವಣೆ ನಡೆಸುವ ನಿರ್ಧಾರವನ್ನು ಕೇಂದ್ರಸರ್ಕಾರ ಪುನರ್ ಪರಿಶೀಲಿಸಬೇಕು ಎಂದು  ಒತ್ತಾಯಿಸಿದರು.
ನ್ಯಾಷನಲ್ ಕಾನ್ಫರೆನ್ಸ್ ಪಕ್ಷ  ನಗರ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿದ್ದು, ಮುಪ್ತಿ ಮೆಹಬೂಬಾ ನೇತೃತ್ವದ ಪಿಡಿಪಿ ಕೂಡಾ ಮುಂಬರುವ ನಗರ ಹಾಗೂ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವುದಾಗಿ  ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com