ಶಿಕ್ಷೆ ಜಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅಪರಾಧ ಪ್ರಮಾಣ ಹೆಚ್ಚಾಗುತ್ತಿದೆ: ನಿರ್ಭಯಾ ತಾಯಿ

ಶಿಕ್ಷೆ ಜಾರಿ ಜಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ್ಯಾಂತ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು 2012ರ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆ ನಿರ್ಭಯಾ ...
ಆಶಾದೇವಿ
ಆಶಾದೇವಿ
Updated on
ನವದೆಹಲಿ: ಶಿಕ್ಷೆ ಜಾರಿ  ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ್ಯಾಂತ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು 2012ರ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆ ನಿರ್ಭಯಾ ತಾಯಿ ಆಶಾದೇವಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ದೇಶದಲ್ಲಿ ಅಪರಾಧ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಸಣ್ಣ ವಯಸ್ಸಿನ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ,  ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ನ್ಯಾಯ ಒದಗಿಸಲು ನಮ್ಮ ಅಧಿಕಾರ ವರ್ಗ ಹಿಂದುಳಿಯುತ್ತಿದೆ.ಮರಣ ದಂಡನೆಗೆ 2 ತಿಂಗಳು ಕಾಯಬೇಕು ಎಂದು ಆಶಾದೇವಿ ಬೇಸರ ವ್ಯಕ್ತ ಪಡಿಸಿದ್ದಾರೆ.
ತಿಹಾರ ಜೈಲಿನಲ್ಲಿರುವ ಅಪರಾಧಿಗಳಿಗೆ ಮರಣ ದಂಡನೆ ಸಂಬಂಧ ದೆಹಲಿ ಮಹಿಳಾ ಆಯೋಗ ನೋಟೀಸ್ ನೀಡಿರುವ ಹಿನ್ನೆಲೆಯಲ್ಲಿ ಆಕೆ ಹೇಳಿದ್ದಾರೆ.
ದೆಹಲಿ ಮಹಿಳಾ ಆಯೋಗಕ್ಕೆ ಸಹಾಯ ಮಾಡುವಂತೆ ನಾನು ಮನವಿ ಮಾಡಿದ್ದೇನೆ, ಅಪರಾಧಿಗಳಿಗೆ ಮರಣ ದಂಡನೆ ನೀಡಲು ವಿಳಂಬ ಮಾಡುತ್ತಿರುವುದರ ಸಂಬಂಧ ತಿಹಾರ ಜೈಲು ಪ್ರಾಧಿಕಾರಕ್ಕೆ  ದೆಹಲಿ ಮಹಿಳಾ ಆಯೋಗ ನೊಟೀಸ್ ನೀಡಿದೆ. ಆದರೆ ನನಗೆ ತಿಳಿಯುತ್ತಿಲ್ಲ ಇನ್ನೂ ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. 
ದೇಶದಲ್ಲಿ ಅಪರಾಧ ಪ್ರಮಾಣಗಳು ಏರುತ್ತಿರುವುದಕ್ಕೆ  ಕಾನೂನು ಅಧಿಕಾರಿಗಳು ಕಾರಣವಾಗಿದೆ,  ಹೆಚ್ಚು ಕಡಿಮೆ ಆರು ವರ್ಷಗಳೇ ಕಳೆಯುತ್ತಿವೆ,. ಕಾನೂನು ಜಾರಿ ಇಲಾಖೆಗೆ ಇದೊಂದು ಸವಾಲಾಗಿದೆ. ಎಲ್ಲಾ ಬದಲಾವಣೆಗಳು ಕೇವರ ಕಾಗದದ ಮೇಲಷ್ಟೆ ಆಗಿವೆ,  ನ್ಯಾಯ ವಿಳಂಭದಿಂದ  ಅಪರಾಧಿಗಳಿಗೆ ರಕ್ಷಣೆ ನೀಡಿದಂತಾಗುತ್ತಿದೆ. ಅಪರಾಧಿಗಳಿಗೆ ಸಾವಿರ ಅವಕಾಶಗಳಿರುತ್ತವೆ ಎಂದು ಕಿಡಿ ಕಾರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com