ಭುವನೇಶ್ವರ್: ರಸ್ತೆಯಲ್ಲೇ ನೃತ್ಯ ಮಾಡುತ್ತಾ ಸಂಚಾರ ದಟ್ಟಣೆ ನಿಯಂತ್ರಿಸುವ ಗೃಹ ರಕ್ಷಕ!

ರಾಜಧಾನಿ ಭುವನೇಶ್ವರ್ ನಲ್ಲಿ ಸಂಚಾರ ನಿಯಂತ್ರಣಕ್ಕಾಗಿ ನಿಯೋಜಿಸಲಾಗಿರುವ ಗೃಹ ರಕ್ಷಕ ಸಿಬ್ಬಂದಿಯೊಬ್ಬ ರಸ್ತೆಯಲ್ಲಿಯೇ ನೃತ್ಯ ಮಾಡುತ್ತಾ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದಾರೆ.
ಗೃಹ ರಕ್ಷಕನ ನೃತ್ಯ
ಗೃಹ ರಕ್ಷಕನ ನೃತ್ಯ

ಒಡಿಶಾ: ರಾಜಧಾನಿ ಭುವನೇಶ್ವರ್ ನಲ್ಲಿ ಸಂಚಾರ ನಿಯಂತ್ರಣಕ್ಕಾಗಿ ನಿಯೋಜಿಸಲಾಗಿರುವ ಗೃಹ ರಕ್ಷಕ ಸಿಬ್ಬಂದಿಯೊಬ್ಬ ರಸ್ತೆಯಲ್ಲಿಯೇ ನೃತ್ಯ ಮಾಡುತ್ತಾ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದಾರೆ.

34 ವರ್ಷದ ಪ್ರತಾಪ್ ಚಂದ್ರ ಖಾಂದ್ವಾಲ್ ಈ ರೀತಿಯ ನೃತ್ಯದ ಮೂಲಕ ವಾಹನ ಸವಾರು ಹಾಗೂ ಪ್ರಯಾಣಿಕರನ್ನು ರಂಜಿಸುತ್ತಿದ್ದಾರೆ.

ಗೃಹ ರಕ್ಷಕರಾಗಿರುವ ಪಿ. ಸಿ. ಖಂದ್ವಾಲ್ ಅವರನ್ನು ಟ್ರಾಫಿಕ್ ನಿಯಂತ್ರಣಕ್ಕಾಗಿ ಸಂಚಾರಿ ಪೊಲೀಸ್ ಆಗಿ ನಿಯೋಜಿಸಲಾಗಿದೆ. ಆದರೆ, ಈತ ನೃತ್ಯ ಮಾಡುವ ಮೂಲಕ ಸವಾರರನ್ನು ಮೋಡಿ ಮಾಡುವುದಲ್ಲದೆ, ನಿಯಮ ಉಲ್ಲಂಘನೆಯಾಗದಂತೆ ಸಂದೇಶ ನೀಡುತ್ತಿದ್ದಾರೆ.

ಈ ಕುರಿತಂತೆ ಸುದ್ದಿಸಂಸ್ಥೆಯೊಂದರ ಜೊತೆಗೆ ಮಾತನಾಡಿರುವ ಪಿ.ಸಿ. ಖಾಂದ್ವಾಲ್,  ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸದಂತೆ  ನೃತ್ಯ ಮೂಲಕ  ಮನವೊಲಿಸುತ್ತೇನೆ. ನೃತ್ಯ ಶೈಲಿಯಿಂದ ಆಕರ್ಷಿತಗೊಂಡ ಜನರು ಜನರು ನಿಯಮ ಪಾಲಿಸುತ್ತಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com