ಕೇರಳ ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಜೈಸಲ್‌ಗೆ ಮಹೀಂದ್ರ ಕೊಟ್ಟ ಭರ್ಜರಿ ಗಿಫ್ಟ್!

ರುದ್ರ ಮಹಾಜಲಪ್ರಳಯಕ್ಕೆ ತತ್ತರಿಸಿದ್ದ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಜೈಸಲ್ ಗೆ ಮಹೀಂದ್ರ ಸಂಸ್ಧೆ ಭರ್ಜರಿ ಗಿಫ್ಟ್ ನೀಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತಿರುವನಂತಪುರ: ರುದ್ರ ಮಹಾಜಲಪ್ರಳಯಕ್ಕೆ ತತ್ತರಿಸಿದ್ದ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಜೈಸಲ್ ಗೆ ಮಹೀಂದ್ರ ಸಂಸ್ಧೆ ಭರ್ಜರಿ ಗಿಫ್ಟ್ ನೀಡಿದೆ. 
ಪ್ರವಾಹದ ವೇಳೆ ಸಂತ್ರಸ್ತರು ದೋಣಿಯನ್ನು ಹತ್ತಲು ನೆರವಾಗಲು ಜೈಸಲ್ ನೀರಿನ ಮಧ್ಯೆ ನೆಲಕ್ಕೆ ಬಾಗಿ ಬೆನ್ನು ನೀಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಜೈಸಲ್ ನಡೆಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತ್ತು. 
ಇದೀಗ ಮಹೀಂದ್ರ ಸಂಸ್ಧೆ ತನ್ನ ಹೊಸ ಉತ್ಪನ್ನ ಕಳೆದ ವಾರವಷ್ಟೇ ಮಾರುಕಟ್ಟೆಗೆ ಬಂದಿದ್ದ ಮಹಿಂದ್ರ ಮರಾಜೋ ಕಾರನ್ನು ಮಹೀಂದ್ರ ಕಾರು ಮಾರಾಟ ಘಟಕ ಈರಂ ಮೋಟಾರ್ಸ್ ವತಿಯಿಂದ ಜೈಸಲ್ ಗೆ ನೀಡಿದೆ. 
ಮಹೀಂದ್ರ ಮರಾಜೋ ಕಾರಿನ ಬೆಲೆ 9..99 ಲಕ್ಷ ರುಪಾಯಿಯಾಗಿದ್ದು ಕೇರಳ ಕಾರ್ಮಿಕ ಸಚಿವ ಟಿಪಿ ರಾಮಕೃಷ್ಣನ್ ಅವರು ಜೈಸಲ್ ಗೆ ಕಾರಿನ ಕೀ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com