ಎಥೆನಾಲ್ ಬೆಲೆ ಲೀಟರ್ ಗೆ 52.43 ರೂ, ಕೇಂದ್ರ ಸಂಪುಟ ಸಮ್ಮತಿ: ಧರ್ಮೇಂದ್ರ ಪ್ರಧಾನ್

ನಿರಂತರ ಪೆಟ್ರೋಲ್ ಹಾಗೂ ಡೀಸೆಲ್ ದರದಿಂದ ಹೈರಾಣಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್. ಎಥೆನಾಲ್ ದರದಲ್ಲೂ ಏರಿಕೆಯಾಗಿದೆ. ಪ್ರತಿ ಲೀಟರ್ ಎಥೆನಾಲ್ ಗೆ 52.43 ರೂಪಾಯಿಯನ್ನು ಕೇಂದ್ರ ಸಂಪುಟ ಸಭೆಯಲ್ಲಿ ನಿಗದಿಪಡಿಸಲಾಗಿದೆ.
ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್

ನವದೆಹಲಿ: ನಿರಂತರ ಪೆಟ್ರೋಲ್ ಹಾಗೂ ಡೀಸೆಲ್ ದರದಿಂದ ಹೈರಾಣಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್.  ಎಥೆನಾಲ್ ದರದಲ್ಲೂ ಏರಿಕೆಯಾಗಿದೆ.  ಪ್ರತಿ ಲೀಟರ್ ಎಥೆನಾಲ್ ಗೆ 52.43 ರೂಪಾಯಿಯನ್ನು ಕೇಂದ್ರ ಸಂಪುಟ ಸಭೆಯಲ್ಲಿ ನಿಗದಿಪಡಿಸಲಾಗಿದೆ.

ಈ ಹಿಂದೆ ಲೀಟರ್  ಎಥೆನಾಲ್ ದರ 47. 49 ರೂ.  ಇತ್ತು. ಆದರೆ, ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಎಥೆನಾಲ್  ದರವನ್ನು ಕೂಡಾ ಏರಿಸಲಾಗಿದೆ ಎಂದು ಸಭೆಯ ಬಳಿಕ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಬ್ಬು, ಗೋಧಿ, ಜೋಳ ಮತ್ತಿತರ ಬೆಳೆಗಳಿಂದ ಉತ್ಪಾದಿಸುವ  ಎಥೆನಾಲ್ ನ್ನು ಪರಿಸರ ಸ್ನೇಹಿ ಇಂಧನವನ್ನಾಗಿ   ವಾಹನಗಳಿಗೆ ಬಳಸಲಾಗುತ್ತದೆ. ಪೆಟ್ರೋಲ್ , ಹಾಗೂ ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಸ್ ಪ್ರಯಾಣ ದರ ಕೂಡಾ ದುಬಾರಿಯಾಗುತ್ತಿದ್ದು, ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com