ಸೆ.15 ರಂದು 'ಸ್ವಚ್ಛತೆಯೇ ಸೇವೆ' ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಇದೇ ತಿಂಗಳ 15 ರಂದು ಸ್ವಚ್ಛತೆಯೇ ಸೇವೆ ಆಂದೋಲನಕ್ಕೆ ಚಾಲನೆ ದೊರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ರಾಷ್ಟ್ರಪತಿ ಮಹಾತ್ಮಗಾಂಧಿ ಅವರ 150 ಜನ್ಮ ವಾರ್ಷಿಕೋತ್ಸವ ಅಂಗವಾಗಿ ಈ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಇದೇ ತಿಂಗಳ 15 ರಂದು ಸ್ವಚ್ಛತೆಯೇ ಸೇವೆ ಆಂದೋಲನಕ್ಕೆ  ಚಾಲನೆ ದೊರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಮಹಾತ್ಮಗಾಂಧಿ ಅವರ 150 ಜನ್ಮ ವಾರ್ಷಿಕೋತ್ಸವ  ಅಂಗವಾಗಿ ಈ  ಆಂದೋಲನವನ್ನು  ಹಮ್ಮಿಕೊಳ್ಳಲಾಗಿದೆ.

ಈ ಆಂದೋಲನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಮತ್ತು ಸ್ವಚ್ಛ ಭಾರತ ನಿರ್ಮಾಣ ಮಾಡಲು ದೃಢ ಸಂಕಲ್ಪ ಮಾಡುವಂತೆ  ನರೇಂದ್ರಮೋದಿ ಸರಣಿ ಟ್ವಿಟ್ ಸಂದೇಶದಲ್ಲಿ ಒತ್ತಾಯಿಸಿದ್ದಾರೆ.

ಅಕ್ಟೋಬರ್ 2 ಮಹಾತ್ಮಗಾಂಧಿ ಅವರ 150 ಜನ್ಮ ದಿನ ವಾರ್ಷಿಕೋತ್ಸವ  ಅಲ್ಲದೇ, ಮಹಾತ್ಮಗಾಂಧಿ ಅವರ  ಸ್ವಚ್ಛ ಭಾರತ ಕನಸು  ಈಡೇರಿಸುವ ನಿಟ್ಟಿನಲ್ಲಿ ಹಾಕಿಕೊಳ್ಳದ ಸ್ವಚ್ಛ ಭಾರತ ಮಿಷನ್ 4 ವರ್ಷ ಪೂರ್ಣಗೊಳಿಸಿದ ದಿನವಾಗಿದ್ದು, ಸ್ವಚ್ಛ ಭಾರತ  ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಎಲ್ಲರಿಗೂ ನಮನ ಸಲ್ಲಿಸುವುದಾಗಿ  ಪ್ರಧಾನಿ ಹೇಳಿದ್ದಾರೆ.

 ಸ್ವಚ್ಚತೆಯೇ ಸೇವೆ ಆಂದೋಲನ  ಸೆಪ್ಟೆಂಬರ್ 15 ರಿಂದ ಆರಂಭವಾಗಲಿದೆ. ಮಹಾತ್ಮ ಗಾಂಧೀಜಿ ಅವರಿಗೆ ನಮನ ಸಲ್ಲಿಸಲು ಇದೊಂದು ದಾರಿಯಾಗಿದ್ದು, ಈ ಆಂದೋಲನದ ಭಾಗವಾಗಿ  ಸ್ವಚ್ಛ ಭಾರತ ನಿರ್ಮಾಣಕ್ಕೆ ದೃಢ ಸಂಕಲ್ಪ ಮಾಡಿ ಎಂದು ಟ್ವಿಟ್ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com