ಜಮ್ಮು-ಕಾಶ್ಮೀರ ಸ್ಥಳೀಯ ಸಂಸ್ಥೆ ಚುನಾವಣೆ: ಎನ್ ಸಿ, ಪಿಡಿಪಿ ಹೇಳಿಕೆಗೆ ಧ್ವನಿಗೂಡಿಸಿದ ಕಾಂಗ್ರೆಸ್

ಜಮ್ಮು-ಕಾಶ್ಮೀರದ ಸ್ಥಳೀಯ ಸಂಸ್ಥೆ ಚುನಾವಣೆಗೆ ವಾತಾವರಣ ಸೂಕ್ತವಾಗಿಲ್ಲ ಎಂಬ ಪಿಡಿಪಿ ಹೇಳಿಕೆಗೆ ಕಾಂಗ್ರೆಸ್ ಪಕ್ಷ ಧ್ವನಿಗೂಡಿಸಿದೆ.
ಕಾಂಗ್ರೆಸ್
ಕಾಂಗ್ರೆಸ್
ಶ್ರೀನಗರ: ಜಮ್ಮು-ಕಾಶ್ಮೀರದ ಸ್ಥಳೀಯ ಸಂಸ್ಥೆ ಚುನಾವಣೆಗೆ ವಾತಾವರಣ ಸೂಕ್ತವಾಗಿಲ್ಲ ಎಂಬ ಪಿಡಿಪಿ ಹೇಳಿಕೆಗೆ ಕಾಂಗ್ರೆಸ್ ಪಕ್ಷ ಧ್ವನಿಗೂಡಿಸಿದೆ. 
ಸ್ಥಳೀಯ ನಿವಾಸಿಗಳಿಗೆ ವಿಶೇಷ ಸೌಲಭ್ಯ, ಹಕ್ಕುಗಳನ್ನು ಕಲ್ಪಿಸುವ ಆರ್ಟಿಕಲ್ 35ಎಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.  ಕೇಂದ್ರ ಸರ್ಕಾರ ಆರ್ಟಿಕಲ್ 35ಎನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಎನ್ ಸಿ ಹಾಗೂ ಪಿಡಿಪಿ ರಾಜ್ಯದಲ್ಲಿ ನಡೆಯಬೇಕಿದ್ದ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹೇಳಿತ್ತು. 
ಸ್ಥಳೀಯ ಸಂಸ್ಥೆ ಚುನಾವಣೆಯ ಬಗ್ಗೆ ಮಾತನಾಡಿದ್ದ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ. "ಚುನಾವಣೆ ಎದುರಿಸುವುದಕ್ಕೆ ಅನುಕೂಲವಾದ ವಾತಾವರಣ ಇಲ್ಲ" ಎಂದಿದ್ದರು. ಈ ಬೆನ್ನಲ್ಲೇ ಚುನಾವಣೆ ನಡೆಸುವ ಬಗ್ಗೆ ನಡೆದ ಪಕ್ಷದ ಸಭೆಯ ನಂತರ ಮಾತನಾಡಿರುವ ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಜಿ.ಎ ಮಿರ್, ಸ್ಥಳೀಯ ಸಂಸ್ಥೆ ಚುನಾವಣೆಯನ್ನು ನಡೆಸುವುದಕ್ಕೆ ಸೂಕ್ತ ವಾತಾವರಣ ಇಲ್ಲ ಎಂದಿದ್ದಾರೆ. 
ರಾಜ್ಯದಲ್ಲಿರುವ ವಾಸ್ತವದ ಸ್ಥಿತಿಗತಿಗಳನ್ನು ಅರಿಯದೇ ಚುನಾವಣೆಯನ್ನು ಘೋಷಿಸಲಾಗಿದೆ. ಚುನಾವಣೆಯನ್ನು ನಿಜವಾಗಿಯೂ ನಡೆಸಲು ಉದ್ದೇಶಿಸಲಾಗಿದೆಯೇ ಅಥವಾ ಇದು ಕೇವಲ ಗಿಮಿಕ್ ಆಗಿದೆಯೇ ಎಂಬ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಜಿ.ಎ ಮಿರ್ ಹೇಳ್ದಿದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com