ಲೈಂಗಿಕ ಕಿರುಕುಳ: ಟಿಇಆರ್ ಐ ಮಾಜಿ ಮುಖ್ಯಸ್ಥ ಪಚೌರಿ ವಿರುದ್ಧ ತನಿಖೆಗೆ ದೆಹಲಿ ಕೋರ್ಟ್ ಆದೇಶ

ದಿ ಎನರ್ಜಿ ಆಂಡ್ ರಿಸೋರ್ಸಸ್ ಇನ್ ಸ್ಟಿಟ್ಯೂಟ್ ನ ಮಾಜಿ ಅಧ್ಯಕ್ಷ ಆರ್. ಕೆ. ಪಚೌರಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳುವಂತೆ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಆರ್. ಕೆ. ಪಚೌರಿ
ಆರ್. ಕೆ. ಪಚೌರಿ
ನವದೆಹಲಿ: ದಿ ಎನರ್ಜಿ ಆಂಡ್ ರಿಸೋರ್ಸಸ್ ಇನ್ ಸ್ಟಿಟ್ಯೂಟ್ ನ ಮಾಜಿ ಅಧ್ಯಕ್ಷ ಆರ್. ಕೆ. ಪಚೌರಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳುವಂತೆ ದೆಹಲಿ ನ್ಯಾಯಾಲಯ ಆದೇಶಿಸಿದೆ.
ದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಮೂರ್ತಿಗಳಾದ  ಚರು ಗುಪ್ತಾ ಭಾರತೀಯ ದಂಡ ಸಂಹಿತೆಯೆ ಸೆಕ್ಷನ್ 354, 354 ಎ  ಮತ್ತು 509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಅದಾಗ್ಯೂ ಪಚೌರಿ ವಿರುದ್ಧ ಕೆಲವಷ್ಟು ಆರೋಪಗಳನ್ನು ನಿರಾಜರಿಸಿರುವ ಕೋರ್ಟ್  ಅಕ್ಟೋಬರ್ 20 ರಂದು  ತಾನು ಅಧಿಕೃತವಾಗಿ ಚಾರ್ಜ್ ವಿಧಿಸುವುದಾಗಿ ಹೇಳಿದೆ.
ಫೆಬ್ರವರಿ 13, 2015ರಲ್ಲಿ ಟಿಇಆರ್ ಐ ಮಾಜಿ ಮುಖ್ಯಸ್ಥ ಪಚೌರಿ ತನಗೆ ಲೈಂಗಿಕ ಕಿರುಕುಳ ನಿಡಿದ್ದರೆಂದು ಅದೇ ಸಂಸ್ಥೆಯ ಮಾಜಿ ಉದ್ಯೋಗಸ್ಥ ಮಹಿಳೆಯೊಬ್ಬರು ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪಚೌರಿ ಮಾರ್ಚ್ 21 ರಂದು ತಾವು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com