ಅಲಹಾಬಾದ್‌ನಲ್ಲಿ ಮಾಜಿ ಪ್ರಧಾನಿ ನೆಹರೂ ಪ್ರತಿಮೆ ತೆರವು: ಯೋಗಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ತೆರವುಗೊಳಿಸಿದ್ದು ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ...
ಯೋಗಿ ಆದಿತ್ಯನಾಥ್-ಕಾಂಗ್ರೆಸ್
ಯೋಗಿ ಆದಿತ್ಯನಾಥ್-ಕಾಂಗ್ರೆಸ್
ಅಲಹಾಬಾದ್: ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ತೆರವುಗೊಳಿಸಿದ್ದು ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. 
2019ರ ಜನವರಿಯಲ್ಲಿ ನಡೆಯುವ ಕುಂಭಮೇಳಕ್ಕಾಗಿ ನಗರವನ್ನು ಸುಂದರೀಕರಿಸುವ ನಿಟ್ಟಿನಲ್ಲಿ ನಗರದ ಬಲ್ಸಾನ್ ಚೌರಾಹಾದಲ್ಲಿದ್ದ ನೆಹರೂ ಪ್ರತಿಮೆಯನ್ನು ನಿನ್ನೆ ತೆರವುಗೊಳಿಸಲಾಗಿತ್ತು. ಈ ಸಂಬಂಧ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್. ನೆಹರೂ ಪ್ರತಿಮೆಯನ್ನು ತೆರವುಗೊಳಿಸುವುದಾದರೆ ಇದೇ ರಸ್ತೆಯಲ್ಲಿ ಮುಂದೆ ಒಂದೆಡೆ ಇರುವ ಪಂಡಿತ್ ದೀನ ದಯಾಳ್ ಅವರ ಪ್ರತಿಮೆಯನ್ನು ಯಾಕೆ ಮುಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ. 
ಉದ್ದೇಶಪೂರ್ವಕವಾಗಿ ನೆರಹೂ ಪ್ರತಿಮೆಯನ್ನು ತೆರವು ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳು ಪ್ರತಿಭಟನೆ ನಡೆಸಿವೆ. ಪ್ರತಿಮೆ ತೆರವಿನ ಕ್ರೇನ್ ಗೆ ತಡೆಯೊಡ್ಡಿರುವ ಈ ಪಕ್ಷಗಳ ಕಾರ್ಯಕರ್ತರು ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿದರು. 
ರಸ್ತೆ ಅಗಲೀಕರಣಕ್ಕಾಗಿ ನಡುರಸ್ತೆಯಲ್ಲಿದ್ದ ನೆಹರೂ ಪ್ರತಿಮೆಯನ್ನು ತೆರವುಗೊಳಿಸಲಾಗಿದ್ದು ತತ್ಕಾಲಕ್ಕೆ ಪ್ರತಿಮೆಯನ್ನು ಸಮೀಪದ ಪಾರ್ಕ್ ನಲ್ಲಿ ಇರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com