ಇಸ್ರೋ ಬೇಹುಗಾರಿಕೆ ಪ್ರಕರಣ: ಪಿವಿ ನರಸಿಂಹ ರಾವ್ ನನ್ನ ತಂದೆಗೆ ಮೋಸ ಮಾಡಿದ್ದರು- ಕರುಣಾಕರನ್ ಪುತ್ರ

ಇಸ್ರೋ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇರಳ ಮಾಜಿ ಸಿಎಂ ಕರುಣಾಕರನ್ ಪುತ್ರ ಮುರಳೀಧರನ್, ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ನಮ್ಮ ತಂದೆಗೆ ಮೋಸ
ಪಿವಿ ನರಸಿಂಹ ರಾವ್ - ಕರುಣಾಕರನ್
ಪಿವಿ ನರಸಿಂಹ ರಾವ್ - ಕರುಣಾಕರನ್
ಇಸ್ರೋ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇರಳ ಮಾಜಿ ಸಿಎಂ ಕರುಣಾಕರನ್ ಪುತ್ರ ಮುರಳೀಧರನ್, ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ನಮ್ಮ ತಂದೆಗೆ ಮೋಸ ಮಾಡಿದ್ದರು ಎಂದು ಆರೋಪಿಸಿದ್ದಾರೆ. 
"1994 ರ ಇಸ್ರೋ ಬೇಹುಗಾರಿಕೆ ಪ್ರಕರಣದ ನಂತರದ ದಿನಗಳಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಿವಿ ನರಸಿಂಹ ರಾವ್ ಅವರು ನನ್ನ ತಂದೆ ಕರುಣಾಕರನ್ ಗೆ ಮೋಸ ಮಾಡಿದ್ದರು. ನನ್ನ ತಂದೆ ಹೇಳಿರುವ ಪ್ರಕಾರ, ಪಿವಿ ನರಸಿಂಹ ರಾವ್ ಅವರ ಅಂದಿನ ನಡೆಯ  ಬಗ್ಗೆ ಅವರಿಗೆ ಬೇಸರವಿತ್ತು. 1995 ರ ಮಾ.15 ರಂದು ನನ್ನ ತಂದೆಗೆ ಕರೆ ಮಾಡಿದ್ದ ಕಾಂಗ್ರೆಸ್ ನಾಯಕ ಜಿ.ಕೆ ಮೂಪನಾರ್ ಅವರು ನರಸಿಂಹ ರಾವ್ ಅವರ ಸೂಚನೆಯಂತೆ ರಾಜೀನಾಮೆ ನೀಡುವಂತೆ ಸಲಹೆ ನೀಡಿದ್ದರು. ಅದರಂತೆಯೇ ನನ್ನ ತಂದೆ ಕರುಣಾಕರನ್ ರಾಜೀನಾಮೆಯನ್ನೂ ನೀಡಿದ್ದರು.
ಕೇರಳದಲ್ಲಿ ಯಾರೂ ಸಹ ಅಂದಿನ ಸಿಎಂ ಕರುಣಾಕರನ್ ಅವರ ರಾಜೀನಾಮೆಯನ್ನು ಕೇಳಿರಲಿಲ್ಲ.  ಆದರೆ ಗುಂಪುಗಾರಿಕೆಯ ದ್ವೇಷದ ರಾಜಕಾರಣದಿಂದ ಕರುಣಾಕರನ್ ರಾಜೀನಾಮೆ ನೀಡಬೇಕಾಯಿತು ಎಂದು ಮುರಳೀಧರನ್ ಹೇಳಿದ್ದಾರೆ. ಒಂದು ವೇಳೆ ನರಸಿಂಹ ರಾವ್ ಅವರಿಲ್ಲದೇ ನೆಹರು-ಗಾಂಧಿ ಕುಟುಂಬದವರು ಕಾಂಗ್ರೆಸ್ ನೇತೃತ್ವ ವಹಿಸಿದ್ದರೆ ಕರುಣಾಕರನ್ ಸಿಎಂ ಸ್ಥಾನ ಕಳೆದುಕೊಳ್ಳುತ್ತಿರಲಿಲ್ಲ ಎಂದು ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com