ಜೆಎನ್ ಯು ವಿದ್ಯಾರ್ಥಿ ಸಂಘದ ಚುನಾವಣೆ: ಎಬಿವಿಪಿಗೆ ಹಿನ್ನಡೆ, ಎಲ್ಲಾ 4 ಸ್ಥಾನಗಳನ್ನು ಗೆದ್ದ ಎಡರಂಗ!

ಜೆಎನ್ ಯು ವಿದ್ಯಾರ್ಥಿ ಸಂಘದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಲ್ಲಾ 4 ಸ್ಥಾನಗಳಲ್ಲಿ ಎಡರಂಗ ಗೆದ್ದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜೆಎನ್ ಯು ವಿದ್ಯಾರ್ಥಿ ಸಂಘದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಲ್ಲಾ 4 ಸ್ಥಾನಗಳಲ್ಲಿ ಎಡರಂಗ ಗೆದ್ದಿದೆ. 
ಎಐಎಸ್ಎ, ಎಸ್ಎಫ್ಐ, ಎಐಎಸ್ಎಫ್, ಡಿಎಸ್ಎಫ್ ಸೇರಿದಂತೆ ಎಡರಂಗ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆದ್ದಿದೆ.  ಎನ್ ಸಾಯಿ ಬಾಲಾಜಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರೆ, ಸಾರಿಕ ಚೌಧರಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.  ಪ್ರಧಾನ ಕಾರ್ಯಾದರ್ಶಿಯಾಗಿ ಅಜೀಜ್ ಅಹ್ಮದ್ ಆಯ್ಕೆಯಾಗಿದ್ದರೆ, ಅಮೃತಾ ಜಯದೀಪ್ ಜಂಟಿ ಕಾರ್ಯದರ್ಶಿಯಾಗಿದ್ದಾರೆ. 
ಜೆಎನ್ಯುಎಸ್ ಯು ಚುನಾವಣೆಯ ಮತ ಎಣಿಕೆ ಕಾರ್ಯ ಸೆ.15ರ ಸಂಜೆಯಿಂದಲೇ ಪ್ರಾರಂಭವಾಗಿತ್ತಾದರೂ ಸುಮಾರು 12 ಗಂಟೆಗಳಷ್ಟು ವಿಳಂಬ ಉಂಟಾಗಿತ್ತು. ಈ ನಡುವೆ ಎಬಿಚಿಪಿ ಮತಗಳ ಮರು ಎಣಿಕೆಗೆ ಆಗ್ರಹಿಸಿತ್ತು. ಅಷ್ತೇ ಅಲ್ಲದೇ ಎಡರಂಗದೊಂದಿಗೆ ಚುನಾವಣಾ ಆಯೋಗ ಕೈ ಜೋಡಿಸಿದ್ದು, ತಮ್ಮನ್ನು ಚುನಾವಣಾ ಮತ ಎಣಿಕೆ ವೇಳೆ ಉದ್ದೇಶಪೂರ್ವಕಾಗಿ ಹೊರಗೆ ಕಳಿಸಲಾಗಿದೆ ಎಂದು ಆರೋಪಿಸಿತ್ತು. 
ವಿದ್ಯಾರ್ಥಿ ಸಂಘದ ವಿವಿಧ ಹುದ್ದೆಗಳಿಗೆ ಸೆ.14 ರಂದು ಚುನಾವಣೆ ನಡೆದು ಶೇ.70 ರಷ್ಟು ಮತ ಚಲಾವಣೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com