ಸಿಪಿಐ (ಎಂ) ನಿಂದಲೂ ಜಮ್ಮು-ಕಾಶ್ಮೀರದಲ್ಲಿ ಪಂಚಾಯತ್ ಚುನಾವಣೆ ಬಹಿಷ್ಕಾರ !

ಜಮ್ಮು-ಕಾಶ್ಮೀರದಲ್ಲಿ ಮುಂಬರುವ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬಹಿಷ್ಕರಿಸಲು ಸಿಪಿಐ (ಎಂ) ಪಕ್ಷ ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮುಂಬರುವ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬಹಿಷ್ಕರಿಸಲು ಸಿಪಿಐ (ಎಂ) ಪಕ್ಷ ನಿರ್ಧರಿಸಿದೆ.

ಪ್ರಮುಖ ಪಕ್ಷಗಳಾದ ನ್ಯಾಷನಲ್ ಕಾನ್ಪರೆನ್ಸ್ ಹಾಗೂ ಪಿಡಿಪಿ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆ  ಚುನಾವಣೆಯಿಂದ  ಹಿಂದೆ ಸರಿದಿರುವುದಕ್ಕೆ  ಕೇಂದ್ರಸರ್ಕಾರದ ವಿರುದ್ಧ    ಸಿಪಿಐ ( ಎಂ) ವಾಗ್ದಾಳಿ ನಡೆಸಿದ್ದು,  ಇದು  ಬಿಜೆಪಿಯ ಸೊಕ್ಕನ್ನು ತೋರಿಸುತ್ತದೆ ಎಂದು  ಸಿಪಿಐ ( ಎಂ )  ರಾಜ್ಯ ಕಾರ್ಯದರ್ಶಿ ಗುಲಾಂ ನಬಿ ಮಲ್ಲಿಕ್  ಹೇಳಿದ್ದಾರೆ.

  ನ್ಯಾಷನಲ್ ಕಾನ್ಪರೆನ್ಸ್ ಹಾಗೂ ಪಿಡಿಪಿ ನಂತರ ಜಮ್ಮು-ಕಾಶ್ಮೀರದಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿರುವ ಸಿಪಿಐ (ಎಂ) ಕೂಡಾ ಈಗ ಚುನಾವಣೆಯಿಂದ ದೂರ ಉಳಿಯುತ್ತಿದೆ.

ಈ ವಿಚಾರದ ಬಗ್ಗೆ ಸರ್ಕಾರ ಎಲ್ಲಾ ಪಕ್ಷಗಳ ಸಭೆ ಕರೆದು ಚರ್ಚಿಸಿ ಮನವೊಲಿಸಬೇಕಾಗಿತ್ತು. ಆದರೆ, ಹಾಗೆ ಮಾಡಿಲ್ಲ. ಈ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚುನಾವಣೆಯಲ್ಲಿ ಪಾಲ್ಗೊಳ್ಳದಿರಲು  ಸಿಪಿಐ ( ಎಂ) ನಿರ್ಧರಿಸಿದೆ ಎಂದು  ಅವರು  ಪಕ್ಷದ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.

ಸಂವಿಧಾನದ 35 ಎ ವಿಧಿ ಬಗ್ಗೆ  ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಪಪಡಿಸುವಂತೆ  ಪ್ರಮುಖ ರಾಜಕೀಯ ಪಕ್ಷಗಳು ಆಗ್ರಹಿಸುತ್ತಿದ್ದರೂ  ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ  ಚುನಾವಣೆ ನಡೆಸುತ್ತಿರುವುದು ತಪ್ಪೆಂದು ಮಲ್ಲಿಕ್  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com