ತೆಲಂಗಾಣ ಮರ್ಯಾದಾ ಹತ್ಯೆ ಆರೋಪಿ ಮೊಹಮ್ಮದ್ ಅಬ್ದುಲ್ ಹಿನ್ನಲೆ ಬಲು ರೋಚಕ, ಭಯಾನಕ!

ಜಾತಿ, ಧರ್ಮದ ಗಡಿ ಮೀರಿ ತಮ್ಮ ಪ್ರೀತಿಗಾಗಿ ಹೆತ್ತವರನ್ನೇ ಎದುರಿಸಿ ಮದುವೆಯಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಅಮೃತವರ್ಷಿಣಿಯ ಪತಿ ದಲಿತ ಯುವಕ ಪ್ರಣಯ್ ಪೆರುಮಲ್ಲ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಹೈದರಾಬಾದ್: ಜಾತಿ, ಧರ್ಮದ ಗಡಿ ಮೀರಿ ತಮ್ಮ ಪ್ರೀತಿಗಾಗಿ ಹೆತ್ತವರನ್ನೇ ಎದುರಿಸಿ ಮದುವೆಯಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಅಮೃತವರ್ಷಿಣಿಯ ಪತಿ ದಲಿತ ಯುವಕ ಪ್ರಣಯ್ ಪೆರುಮಲ್ಲ ಹತ್ಯೆಯ ಹಿಂದಿನ ಸ್ಟೋರಿ ಬಲು ರೋಚಕವಾಗಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಮೊಹಮ್ಮದ್ ಅಬ್ದುಲ್ ಬರಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 
ಮೊಹಮ್ಮದ್ ಅಬ್ದುಲ್ ಬರಿಯ ಹಿನ್ನೆಲೆಯನ್ನು ಕೆದಕಿದಾಗ ಆತ ಗುಜರಾತ್ ನ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಅವರ ಹತ್ಯೆ ಪ್ರಕರಣ ಸಂಬಂಧ 9 ವರ್ಷಗಳ ಕಾಲ ಸಬರ್ ಮತಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ಇದಾದ ನಂತರ ಹೊರ ಬಂದ ಮೊಹಮ್ಮದ್ ಹೈದರಾಬಾದ್ ಗೆ ಹಿಂದಿರುಗಿ ತನ್ನ ಹಳೆಯ ಗ್ಯಾಂಗ್ ಅನ್ನು ಬಲಿಷ್ಠಗೊಳಿಸಲು ಮುಂದಾದ. ಇದೇ ವೇಳೆ ಹಲವು ಭೂ ಅಕ್ರಮ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಸ್ವಲ್ಪ ಸ್ವಲ್ಪವಾಗಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡ ಆತ ನಂತರ ಪ್ರಮುಖ ರಾಜಕಾರಣಿಗಳ ಸಂಪರ್ಕ ಸಾಧಿಸಿದ್ದ. 
ನಲಗೊಂಡದ ಸೈದಾಬಾದ್ ನಲ್ಲಿ ವಾಸವಾಗಿದ್ದ ಮೊಹಮ್ಮದ್ ಗ್ಯಾಂಗ್ ಸ್ಟರ್ ನಯೀಮುದ್ದಿನ್ ಎನ್ ಕೌಂಟರ್ ನಂತರ ತನ್ನ ಅಂಗ ಬಲದಿಂದ ಲ್ಯಾಂಡ್ ಡೀಲ್ ಗಳ ಮೂಲಕ ದುಡ್ಡು ಮಾಡಲು ಮುಂದಾದ. ಈ ಸಮಯದಲ್ಲಿ ಮೊಹಮ್ಮದ್ ಬರಿ ಹಣಕ್ಕಾಗಿ ಉದ್ಯಮಿ ಮಾರುತಿ ರಾವ್ ನನ್ನ ಅಪಹರಣ ಮಾಡಿದ್ದ. ಇದಾದ ನಂತರ ಇಬ್ಬರು ಒಟ್ಟಿಗೆ ಕೆಲ ವ್ಯವಹಾರಗಳನ್ನು ಮಾಡುತ್ತಿದ್ದರು. 
ತಮ್ಮ ಮಗಳು ದಲಿತ ಯುವಕನನ್ನು ಮದುವೆಯಾಗಿರುವುದರಿಂದ ಕೋಪದಿಂದ ಕುದಿಯುತ್ತಿದ್ದ ಅಮೃತವರ್ಷಿಣಿ ತಂದೆ ಮಾರುತಿ ರಾವ್ ತನ್ನ ಮಗಳ ಮನಸ್ಸನ್ನು ಕೆಡಿಸಿ ತಮ್ಮಿಂದ ದೂರು ಮಾಡಿರುವ ಪ್ರಣಯ್ ಪೆರುಮಲ್ಲ ನನ್ನು ಹತ್ಯೆ ಮಾಡು ನಿನಗೆ ಒಂದು ಕೋಟಿ ರುಪಾಯಿ ನೀಡುವುದಾಗಿ ಸುಪಾರಿ ನೀಡಿದ್ದಾರೆ. ಮಾತಿನಂತೆ ಮಾರುತಿ ರಾವ್ ಮೊಹಮ್ಮದ್ ಗೆ 50 ಲಕ್ಷ ರುಪಾಯಿ ಮುಂಗಡ ಹಣವನ್ನು ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com