ಕರುಣಾನಿಧಿ ಸಮಾಧಿ ಸ್ಥಳ ಅಣ್ಣಾ ಡಿಎಂಕೆ ನೀಡಿದ ಭಿಕ್ಷೆ: ಎಐಎಡಿಎಂಕೆ ಸಚಿವ

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಿರಿಯ ನಾಯಕ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ರುಣಾನಿಧಿಯ ಸಮಾಧಿಗಾಗಿ ಮರೀನಾ ಬೀಚ್ ನಲ್ಲಿ ಭೂಮಿ ನಿಡಿದ್ದು ಅಣ್ಣಾ ಡಿಎಂಕೆ ನಿಡಿದ "ಭಿಕ್ಷೆ".....
ಕರುಣಾನಿಧಿ
ಕರುಣಾನಿಧಿ
ಚೆನ್ನೈ: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಿರಿಯ ನಾಯಕ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ರುಣಾನಿಧಿಯ ಸಮಾಧಿಗಾಗಿ ಮರೀನಾ ಬೀಚ್ ನಲ್ಲಿ ಭೂಮಿ ನಿಡಿದ್ದು ಅಣ್ಣಾ ಡಿಎಂಕೆ ನಿಡಿದ "ಭಿಕ್ಷೆ" ಎಂದು ತಮಿಳುನಾಡು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕಡಂಬೂರು ರಾಜು ಹೇಳಿದ್ದಾರೆ.
"ಅಣ್ಣಾ ಸ್ಮಾರಕದಲ್ಲಿ ಭೂಮಿಯನ್ನು ನೀಡಲು ಹೈಕೋರ್ಟ್ ನಿರ್ದೇಶಿಸಿದರೂ, ನಮ್ಮ ಔದಾರ್ಯದಿಂದಾಗಿ ಇದು ಸಾಧ್ಯವಾಗಿದೆ. ಅಣ್ಣಾ ಸ್ಮಾರಕದ ಪಕ್ಕ ಕರುಣಾನಿಧಿಯವರನ್ನು ಸಮಾಧಿ ಮಾಡಲು ಅವರು ಯಾವ ಅರ್ಹತೆ ಹೊಂದಿರಲಿಲ್ಲ. ಒಂದೊಮ್ಮೆ ಮುಖ್ಯಮಂತ್ರಿಯಾಗಿಯೇ ಕರುಣಾನಿಧಿ ಅಸುನೀಗಿದ್ದರೆ ಆಗ ಅವರಿಗೆ ಮರೀನಾ ಬೀಚ್ ನಲ್ಲೇ ಸಮಾಧಿ ಹೊಂದಲು ಸಹಜವಾದ ಅವಕಾಶವಿತ್ತು. ಆದರೂ ನಾವು ದೊಡ್ಡ ಮನಸ್ಸು ಂಆಡಿ ಅವರ ಮೃತದೇಹದ ಸಾರ್ವಜನಿಕ ವೀಕ್ಷಣೆಗೆ ರಾಜಾಜಿ ಹಾಲ್ ನಲ್ಲಿ ಅವಕಾಶ ನೀಡಿದ್ದೆವು" ಸಚಿವರು ಹೇಳಿದ್ದಾರೆ.
ತೂತುಕುಡಿ ಜಿಲ್ಲೆಯ ಕೋವಿಲ್ಪಟ್ಟೈ ನಲ್ಲಿ ನಡೆದ ಸಿ.ಎನ್ ಅಣ್ಣಾದೊರೈ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
"ಅವರು ರಾಜ್ಯದ ಪ್ರಸ್ತುತ ಮುಖ್ಯಮಂತ್ರಿಯಲ್ಲ ಎಂಬ ಕಾರಣದಿಂದ ನಾವು ಕರುಣಾನಿಧಿ ಸಮಾಧಿಗೆ ಮರೀನಾ ಬೀಚ್ ಜ್ಜಾಗ ನೀಡಲು ನಿರಾಕರಿಸಿದ್ದೆವು. ಆದರೆ ಡಿಎಂಕೆ ಪಕ್ಷ ಹೈಕೋರ್ಟ್ ಗೆ ತೆರಳಿ ಸಮಾಧಿಗೆ ಜಾಗ ಪಡೆದರು. ಇದಕ್ಕೆ ನಾವು ಪ್ರತಿಯಾಗಿ ಮೇಲ್ಮನವಿ ಸಲ್ಲಿಸಲು ಹೋಗಲಿಲ್ಲ. ಮರೀನಾದಲ್ಲಿ ಕರುಣಾನಿಧಿ ಸಮಾಧಿಯಾಗಿದ್ದರೆ ಅದು ನಮ್ಮ ದಯೆಯಿಂದಲ್" ಅವರು ಹೇಳಿದರು.
ತಮಿಳುನಾಡಿನ  ರಾಜಕೀಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಈ ವರ್ಷ ಆಗಸ್ಟ್ ನಲ್ಲಿ ತಮ್ಮ 94 ನೇ ವಯಸ್ಸಿನಲ್ಲಿ ವಿಧಿವಶರಾದರು.
ಡಿಎಂಕೆ ಆಕ್ರೋಶ
ಸಚಿವರ ಹೇಳಿಕೆಗೆ ಡಿಎಂಕೆ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಮಹಾನ್ ನಾಯಕರೊಬ್ಬರ ಅನುಪಸ್ಥಿತಿಯಲ್ಲಿ ಅವರ ಕುರಿತು ಹೇಳಿಕೆ ನೀಡುವಾಗ ಜಾಗೃತಿ ವಹಿಸುವುದು ಅಗತ್ಯ, "ಹೈಕೋರ್ಟ್ ಮಧ್ಯಪ್ರವೇಶದಿಂದ ಮರೀನಾ ಬೀಚ್ ನಲ್ಲಿ ಕರುಣಾನಿಧಿ ಸಮಾಧಿ ಆಗಿದ್ದು ಇಂತಹಾ ಕೀಳು ಮಟ್ಟದ ಹೇಳಿಕೆ ನಿಡಿದ ಯಾವ ವ್ಯಕ್ತಿಯನ್ನೂ ಇತಿಹಾಸವು ಕ್ಷಮಿಸುವುದಿಲ್ಲ" ಡಿಎಂಕೆ ಶಾಸಕ ಜೆ. ಅನ್ವಳಗಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com