ವಾಟ್ಸ್ ಅಪ್ ಸಂದೇಶದ ಮೂಲ ತಿಳಿಸುವಂತೆ ಐಟಿ ಸಚಿವಾಲಯದಿಂದ ಅಮೆರಿಕನ್ ಸಂಸ್ಥೆಗೆ ನೋಟೀಸ್?

ದೇಶದಲ್ಲಿ ಹೆಚ್ಚುತ್ತಿರುವ ಸುಳ್ಳು ಸಂದೇಶಗಳ ಪ್ರಸರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ವಾಟ್ಸ್ ಅಪ್ ಗೆ ಮೂರನೇ ಬಾರಿ ನೋಟೀಸ್ ಜಾರಿ ಮಾಡಲು ಮುಂದಾಗಿದೆ. ವಾಟ್ಸ್ ಅಪ್.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಸುಳ್ಳು ಸಂದೇಶಗಳ ಪ್ರಸರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ವಾಟ್ಸ್ ಅಪ್ ಗೆ ಮೂರನೇ ಬಾರಿ ನೋಟೀಸ್ ಜಾರಿ ಮಾಡಲು ಮುಂದಾಗಿದೆ. ವಾಟ್ಸ್ ಅಪ್ ಸಂದೇಶ ಪ್ರಸಾರದ ಮೂಲ ಪತ್ತೆಹಚ್ಚುವ ಅನುಕೂಲ ಕಲ್ಪಿಸಬೇಕು ಎಂದು ಅದು ಕೇಳಿದೆ.
ಆದರೆ ಅಮೆರಿಕಾ ಮೂಲದ ಸಂಸ್ಥೆ ವಾಟ್ಸ್ ಅಪ್ ’ಹಾಗೆ ಮಾಡಿದಲ್ಲಿ ಎಂಡ್ ಟು ಎಂಡ್ ಎನ್ಕ್ರಿ[ಪ್ಶನ್ ಮೇಲೆ ಪರಿಣಾಮ ಬೀರುವುದಲ್ಲದೆ ಬಳಕೆದಾರರ ಗೌಪ್ಯತೆಯನ್ನು ಉಲ್ಲಂಘಿಸಿದಂತಾಗಲಿದೆ ಎಂದಿದೆ.
ಮೂಲದ ಪ್ರಕಾರ ಸರ್ಕಾರದ ಆಂತರಿಕ ವಲಯದಲ್ಲಿ ಈ ಸಂಬಂಧ ಚರ್ಚೆ ನಡೆದಿದ್ದು ಮುಂದಿನ 7-10 ದಿನಗಳಲ್ಲಿ ವಾಟ್ಸ್ ಅಪ್ ಗೆ ಮೂರನೇ ನೋಟೀಸ್ ಕಳಿಸಲು ನಿರ್ಧರಿಸಲಾಗಿದೆ.
ಸಂದೇಶದ  ಮೂಲ ಪತ್ತೆಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಎಂಡ್ ಟು ಎಂಡ್ ಎನ್ಕ್ರಿ[ಪ್ಶನ್ ನಿಯಮದ ಜತೆ ರಾಜಿ ಮಾಡಿಕೊಳ್ಳದೆ ಇರಬೇಕು. ಅಲ್ಲದೆ ಇದಕ್ಕಾಗಿ ಸಂದೇಶ ಎಲ್ಲಿಂದ ಬಂದಿದೆ ಅದು ವೈರಲ್ ಆಗಿದೆಯೆ? ಇದು ಒಂದು ಗರಿಷ್ಠ ಮಿತಿ ಮೀರಿದಲ್ಲಿ ಅದನ್ನು ನಿಯಂತ್ರಿಸುವುದಕ್ಕೆ ಈಗಾಗಲೇ ತಾಂತ್ರಿಕ ಪರಿಹಾರಗಳನ್ನು ಹುಡುಕಲಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲ್ದ ಅಧಿಕ್ರಿಯೊಬ್ಬರು ಹೇಳಿದ್ದಾರೆ.
ವಾಟ್ಸ್ ಅಪ್ ನಲ್ಲಿ ಪ್ರಸಾರವಾದ ನಕಲಿ ಸುದ್ದಿಗಳಿಂದ ಪ್ರೇರೇಪಣೆಗೊಂಡು ದೇಶದಾದ್ಯಂತ ಅನೇಕ ಕಡೆ ಗುಂಪು ಹಲ್ಲೆ, ಹತ್ಯೆಗಳು ನಡೆದಿದೆ.ಇಂತಹ ಪ್ರಚೋದನಕಾ ಸಂದೇಶದ ಮೂಲ ಪತ್ತೆ ಹಚುವ ಮೂಲಕ ಆಪಾದಿತರನ್ನು ಬಂಧಿಸಲು ಸರ್ಕಾರ ಬಯಸಿದ್ದು ಇದಕ್ಕಾಗಿ ವಾಟ್ಸ್ ಅಪ್ ಗೆ ಸರ್ಕಾರ ಇದಾಗಲೇ ಎರಡು ನೋಟೀಸ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com