ಹಿಂದೂ -ಮುಸ್ಲಿಂ ಸಾಮರಸ್ಯ: ಒಂದೇ ಸೂರಿನಡಿ ಗಣೇಶನಿಗೆ ಆರತಿ- ಮೊಹರಂ ಆಜಾನ್!

ಭಾರತದಲ್ಲಿ ಹಿಂದೂ ಮುಸ್ಲಿಮರು ಸಾಮರಸ್ಯದಿಂದ ಬಾಳುವೆ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ....
ಗಣೇಶ ಮತ್ತು ಆಜಾನ್
ಗಣೇಶ ಮತ್ತು ಆಜಾನ್
ಥಾಣೆ(ಮಹಾರಾಷ್ಟ್ರ:)  ಭಾರತದಲ್ಲಿ ಹಿಂದೂ ಮುಸ್ಲಿಮರು ಸಾಮರಸ್ಯದಿಂದ ಬಾಳುವೆ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಮಹಾರಾಷ್ಟ್ರದ ಮುಂಬಯಿನ ಥಾಣೆಯಲ್ಲಿ ಅಲ್ಲಿನ ನಿವಾಸಿಗಳು ಕೋಮು ಸೌಹಾರ್ದತೆ ಮೆರೆದಿದ್ದಾರೆ, ಒಂದೇ ಸೂರಿನಡಿ ಗಣೇಶನಿಗೆ ಆರತಿ ಮಾಡುವುದರ ಜೊತೆಗೆ ಮೊಹರಂಗಾಗಿ  ಆಜಾನ್ ಕೂಗಿದ್ದಾರೆ.
ಏಕ್ತಾ ಮಿತ್ರ ಮಂಡಳಿ ಈ ಕೋಮು ಸಾಮರಸ್ಯಕ್ಕೆ ಕಾರಣವಾಗಿದೆ, ನಾವು ಒಂದೇ ಮೈಕ್ ಬಳಸಿ ಆರತಿ ಮತ್ತು ಆಜಾನ್ ಕೂಗಿದ್ದೇವೆ, ಜೊತೆಗೆ ನಮ್ಮ ಸಂಪ್ರದಾಯದ ವಿಧಿ ವಿಧಾನಗಳಂತೆ ಪೂಜಾ ಕಾರ್ಯಕ್ರಮ ನಡೆಸಿದ್ದೇವೆ ಎಂದು ಭಕ್ತರು ತಿಳಿಸಿದ್ದಾರೆ, 
ಹಿಂದೂ ಮತ್ತು ಮುಸ್ಲಿಮರಲ್ಲಿ ಯಾವುದೇ ದ್ವೇಷ ಭಾವನೆಯಿಲ್ಲ, ರಾಜಕಾರಣಿಗಳು ನಮ್ಮ ಮಧ್ಯೆ ಈ ದ್ವೇಷ ಭಾವನೆ ತುಂಬುತ್ತಾರೆ ಎಂದು ಮತ್ತೊಬ್ಬ ಭಕ್ತ ತಿಳಿಸಿದ್ದಾರೆ, ನಮ್ಮ ಗ್ರಾಮದ ಯಾರೋಬ್ಬರು ಜಾತಿ ಬೇಧವಿಲ್ಲದೇ ಇಂಥಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ, 
ಇಂಥಹ ಕಾರ್ಯಕ್ರಮಗಳಿಂದಾಗಿ ಧರ್ಮಗಳ ನಡುವೆ ಸಾಮರಸ್ಯ ಬೆಳೆಯಲು ಸಹಾಯವಾಗುತ್ತದೆ ಎಂದು ಎಸಿಪಿ ರಮೇಶ್ ತಿಳಿಸಿದ್ದಾರೆ. ಇದರಿಂದ ಸಮಾಜಕ್ಕೆ ಪರಿಣಾಮಕಾರಿಯಾದ ಸಂದೇಶ ರವಾನೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com