ಪಾಕಿಸ್ತಾನದ ಬರ್ಬರತೆಗೆ ಸೇಡು ತೀರಿಸಿಕೊಳ್ಳಬೇಕು- ರಾವತ್

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಭಾರತೀಯ ಯೋಧರನ್ನು ಬರ್ಬರವಾಗಿ ಹತ್ಯೆಗೈಯುತ್ತಿರುವ ಪಾಕಿಸ್ತಾನ ಸೈನಿಕರು ಹಾಗೂ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಸೇನಾ ಮುಖ್ಯಸ್ಥ ರಾವತ್
ಸೇನಾ ಮುಖ್ಯಸ್ಥ ರಾವತ್

ಜೈಪುರ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ  ಭಾರತೀಯ ಯೋಧರನ್ನು ಬರ್ಬರವಾಗಿ ಹತ್ಯೆಗೈಯುತ್ತಿರುವ  ಪಾಕಿಸ್ತಾನ ಸೈನಿಕರು ಹಾಗೂ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಇತ್ತೀಚಿಗೆ ಗಡಿಯಲ್ಲಿ ಕರ್ತವ್ಯ ನಿರತನಾಗಿದ್ದ ಬಿಎಸ್ ಎಫ್ ಯೋಧನ ಕತ್ತು ಸೀಳಿ ಹತ್ಯೆ ಸೇರಿದಂತೆ   ಇನ್ನಿತರ ಮೂವರ ಪೊಲೀಸರನ್ನು ಬರ್ಬರವಾಗಿ ಹತ್ಯೆ ಮಾಡಿದ ನಂತರ ಸೇನಾ ಮುಖ್ಯಸ್ಥರು ಈ ರೀತಿಯ ಆಕ್ರೋಶಭರಿತ ಹೇಳಿಕೆ ನೀಡಿದ್ದಾರೆ.

 ಉಗ್ರರ ಬರ್ಬರತೆ ವಿರುದ್ಧ ಸೇಡು ತೀರಿಸಿಕೊಳ್ಳಬೇಕಿದೆ. ಆದರೆ, ಈ ಬರ್ಬರತೆ ಮರುಕಳಿಸದ ರೀತಿಯಲ್ಲಿ ಅವರಿಗೆ ಸರಿಯಾದ ಪಾಠ ಕಲಿಸಬೇಕಾಗಿದೆ. ಪಾಕಿಸ್ತಾನ ಕೂಡಾ ಇದೇ ನೋವು ಅನುಭವಿಸಬೇಕಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಪಾಕಿಸ್ತಾನ ತನ್ನ ನೆಲವನ್ನು ಭಾರತದ ವಿರೋಧಿಯಾಗಿ ಬಳಸಲು ಉಗ್ರರಿಗೆ ಅವಕಾಶ ನೀಡಬಾರದು,  ಭಯೋತ್ಪಾದನೆಯ ಹಾನಿಯನ್ನು ತಡೆಯಲು ಪಾಕಿಸ್ತಾನದ ಅಗತ್ಯವಿದೆ. ಪಾಕಿಸ್ತಾದ ವಿರುದ್ಧ ಸೂಕ್ತ ಕ್ರಮದ ಅಗತ್ಯವಿದೆ. ಆದರೆ, ಅದು ಬರ್ಬರವಾಗಿರಬಾರದು ಎಂದರು.

ಮೇ ತಿಂಗಳಲ್ಲಿ ಕದನ ವಿರಾಮಕ್ಕೆ ಅವರು ಕೋರಿದ್ದರಿಂದ ನಾವು ಒಪ್ಪಿಕೊಂಡಿದ್ದೇವು. ಆದರೆ , ಇದೇ ರೀತಿಯಲ್ಲಿ ಅವರು ಮುಂದುವರೆಸದ್ದರೆ ನಾವು ಕೂಡಾ ಸರಿಯಾದ ಪಾಠ ಕಲಿಸಬೇಕಾಗಿದೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com