ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ. ಭಾರತದ ಕಮಾಂಡರ್ ಇನ್ ಥೀಫ್ ಎಂದು ಟ್ವೀಟ್ ಮಾಡಿದ್ದಾರೆ, ಪ್ರೆಂಚ್ ಮೂಲದ ಜರ್ನಲ್ ಒಂದರ ಇತ್ತೀಚಿನ ವರದಿಯ ವಿಡಿಯೋ ವನ್ನು ರಾಹುಲ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
ಪ್ರೆಂಚ್ ಡಿಜಿಟಲ್ ವಿಡಿಯೋ ಪಬ್ಲಿಷರ್ ಈ ವಿಡಿಯೋವನ್ನು ಸೃಷ್ಟಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡೆ ಜೊತೆಗೆ ನಡೆಸಿರುವ ಸಂದರ್ಶನದ ಆಯ್ದ ಭಾಗವನ್ನು ಇದರಲ್ಲಿ ಪಬ್ಲಿಷ್ ಮಾಡಲಾಗಿದೆ,
ವಿಡಿಯೋದಲ್ಲಿ ರಾಫೇಲ್ ಡೀಲ್ ನಲ್ಲಿ ಅನಿಲ್ ಅಂಬಾನಿ ಆಯ್ಕೆ ಮಾಡಿಕೊಳ್ಳುವಲ್ಲಿ ಫ್ರಾನ್ಸ್ ಸರ್ಕಾರದ ಪಾತ್ರವಿಲ್ಲ, ಭಾರತ ಸರ್ಕಾರ ಸಲಹೆ ನೀಡಿದ ನಂತರ ಅಂಬಾನಿ ಜೊತೆ ಸಮಾಲೋಚನೆ ನಡೆಸಲಾಯಿತು.
ನಮೆಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ, ಅವರು ನೀಡಿದ್ದನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ, ಹೊಲ್ಲಾಂಡೆ ಅವರ ಈ ಹೇಳಿಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಸ ಯುದ್ಧಕ್ಕೆ ನಾಂದಿಯಾಗಿದೆ.